July 5, 2026

ಸುಳ್ಯ: ನಿಂತಿಕಲ್‌ನಲ್ಲಿ ನಂದಕುಮಾರ್ ಅಭಿಮಾನಿಗಳ
ಶಕ್ತಿ ಪ್ರದರ್ಶನ, ಸೇರಿದ ಅಪಾರ ಜನಸ್ತೋಮ: ಕಾಂಗ್ರೆಸ್ ನಾಯಕ ಆದೇಶವನ್ನು ಲೆಕ್ಕಿಸದೇ ಸೇರಿದ ಜನರು

0
IMG-20230409-WA0031.jpg

ಸುಳ್ಯ: ಸುಳ್ಯ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ನಂದಕುಮಾರ್ ಅವರಿಗೆ ಟಿಕೆಟ್ ನೀಡಬೇಕೆಂದು ನಂದಕುಮಾರ್ ಅಭಿಮಾನಿ ಬಳಗದ ವತಿಯಿಂದ ನಿಂತಿಕಲ್‌ನಲ್ಲಿ ಶಕ್ತಿ ಪ್ರದರ್ಶನ ಪ್ರಾರಂಭಗೊಂಡಿದೆ.

ಸಮಾವೇಶದ ಸಭಾಂಗಣ ತುಂಬಿ ತುಳುಕಿದ್ದು ಸುಳ್ಯ ಮತ್ತು ಕಡಬ ಭಾಗದಿಂದ ಕಾಂಗ್ರೆಸ್ ಕಾರ್ಯಕರ್ತರು, ನಂದಕುಮಾರ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.
ನಂದಕುಮಾರ್ ಅಭಿಮಾನಿ ಬಳಗದ ಸಭೆಯಲ್ಲಿ ಭಾಗವಹಿಸಿದರೆ ಶಿಸ್ತು ಕ್ರಮದ ಎಚ್ಚರಿಕೆಯನ್ನು ಕಾಂಗ್ರೆಸ್ ನಾಯಕರರು ನೀಡಿದ್ದರಾದರೂ ಅದನ್ನು ಲೆಕ್ಕಿಸದೇ ಅಭಿಮಾನಿಗಳು ಸಭೆಯಲ್ಲಿ ಸೇರಿದ್ದಾರೆ.

ನಾಯಕರು ಕಡಿಮೆ ಸಂಖ್ಯೆಯಲ್ಲಿ ಕಂಡು ಬಂದಿದ್ದು ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿದ್ದಾರೆ. ಒಟ್ಟಾರೆಯಾಗಿ ಸುಳ್ಯ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಫೈಟ್ ಕುತೂಹಲ ಕೆರಳಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!