ನ್ಯೂಝಿಲೆಂಡ್ vs ಭಾರತ T-20 ಟೂರ್ನಿ:
ನ್ಯೂಝಿಲೆಂಡ್ ವಿರುದ್ಧ ಭಾರತಕ್ಕೆ 73 ರನ್ ಗಳ ಜಯ
ಕೊಲ್ಕತ್ತಾ: ಈಡನ್ ಗಾರ್ಡನ್ ಕೊಲ್ಕತ್ತಾದಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ಮತ್ತು ಭಾರತ ತಂಡದ 20-20 ಕ್ರಿಕೆಟ್ ಟೂರ್ನಿಯಲ್ಲಿ ನ್ಯೂಝಿಲೆಂಡ್ ವಿರುದ್ಧ ಭಾರತಕ್ಕೆ 73 ರನ್ ಗಳ ಜಯ ಸಾದಿಸಿದೆ. ಇದರೊಂದಿಗೆ ಮೂರು ಪಂದ್ಯದಲ್ಲಿ ಗೆದ್ದು ನ್ಯೂಝಿಲಂಡ್ ಸರಣಿ ವಶಪಡಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡವು ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು. ಮೂರನೇ ಪಂದ್ಯದಲ್ಲಿ ಕೂಡ ಅಮೋಘ ಬ್ಯಾಟಿಂಗ್ ಪ್ರದರ್ಶನ ನಡೆಸಿದ ನಾಯಕ ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕ ಬಾರಿಸಿದರು.
ಭಾರತ ತಂಡದ ರೋಹಿತ್ ಶರ್ಮಾ 56(31), ಇಶಾನ್ ಕಿಶಾನ್ 29(21) ಸೂರ್ಯಕುಮಾರ್ ಯಾದವ್ 0(04), ರಿಷಭ್ ಪಂತ್ 04(06), ಶ್ರೇಯಸ್ ಅಯ್ಯರ್ 25(20), ವೆಂಕಟೇಶ್ ಅಯ್ಯರ್ 20(15), ಹರ್ಷಲ್ ಪಟೇಲ್ 18(11), ದೀಪಕ್ ಚಾಹರ್ 21*(8), ಅಕ್ಷರ್ ಪಟೇಲ್ 02*(4) ರನ್ ಗಳಿಸಿದರು.
ಭಾರತ ನೀಡಿದ ಗುರಿಯನ್ನು ನ್ಯೂಝಿಲೆಂಡ್ ತಂಡವು 17.2 ಓವರುಗಳಲ್ಲಿ 10 ವಿಕೆಟ್ ನಷ್ಟಕ್ಕೆ 111 ರನ್ ಗಳಿಸುವುದರ ಮೂಲಕ 77 ರನ್ ಗಳ ಸೋಲನ್ನು ಅನುಭವಿಸಿತು. ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ ಅರ್ಧಶತಕ ಸಿಡಿಸಿದರೆ, ಉಳಿದ ಆಟಗಾರರ ಕಳಪೆ ಮಟ್ಟದ ಬ್ಯಾಟಿಂಗ್ ಪ್ರದರ್ಶನದಿಂದ ಮೂರನೇ ಆಟದಲ್ಲೂ ಸೋಲನುಭವಿಸುವಂತಾಯಿತು.
ನ್ಯೂಝಿಲೆಂಡ್ ತಂಡದ ಮಾರ್ಟಿನ್ ಗುಪ್ಟಿಲ್ 51(36), ಡಾರ್ಲಿ ಮಿಷೆಲ್ 05(06), ಚಾಪ್ಮಾನ್ 0(02), ಗ್ಲೆನ್ ಫಿಲಿಪ್ಸ್ 0(04), ಸೀಫರ್ಟ್ 17(18), ಜೇಮ್ಸ್ ನೀಶಮ್ 03(07), ಸಾಂಟ್ನರ್ 02(04), ಆಡಮ್ ಮಿಲ್ನೆ 07(06), ಇಶ್ ಸೋದಿ 9(11) ಲೋಕಿ ಫರ್ಗ್ಯುಸನ್ 14(08), ಟ್ರೆಂಟ್ ಬೋಲ್ಟ್ 02*(02) ರನ್ ಗಳಿಸಿದರು.
ಭಾರತ ಪರ ಉತ್ತಮ ಬೌಲಿಂಗ್ ಪ್ರದರ್ಶನ ನಡೆಸಿದ ಅಕ್ಷರ್ ಪಟೇಲ್ 3, ಹರ್ಷಲ್ ಪಟೇಲ್ 2, ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಾಹಲ್, ದೀಪಕ್ ಚಾಹರ್ ತಲಾ 1 ವಿಕೆಟ್ ಪಡೆದರು.