December 16, 2025

ಬಂಟ್ವಾಳ: ರೈಲ್ವೆ ಹಳಿಯ ಸಮೀಪ ಅಗ್ನಿ ಅವಘಡ: ಬಿಸಿರೋಡಿನಿಂದ ನಂದಾವರಕ್ಕೆ ತೆರಳುವ ರಸ್ತೆ ಕೆಲ ಕಾಲ ಬಂದ್

0
IMG-20230406-WA0019.jpg

ಬಂಟ್ವಾಳ: ಬಿಸಿರೋಡಿನ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತದ ಬಳಿ ರೈಲ್ವೆ ಹಳಿಯ ಸಮೀಪ ಹಾಗೂ ಅದರ ಎದುರು ಬದಿಯ ಹುಲ್ಲಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಕೆಲ ಹೊತ್ತು ಬಿಸಿರೋಡಿನಿಂದ ನಂದಾವರಕ್ಕೆ ತೆರಳುವ ರಸ್ತೆ ಬಂದ್ ಆಗಿರುವ ಘಟನೆ ವರದಿಯಾಗಿದೆ.

ರಸ್ತೆಯ ಎರಡೂ ಬಾಗದಲ್ಲಿ ಕಸದ ರಾಶಿ ಬಿದ್ದಿದ್ದು ಕಸದ ರಾಶಿಗೆ ಯಾರೋ ಬೆಂಕಿ ಹಾಕಿರ ಬೇಕು ಎಂದು ಹೇಳಲಾಗುತ್ತಿದ್ದು, ರಸ್ತೆ ತುಂಬಾ ಹೊಗೆ ತುಂಬಿದ್ದು, ಬೆಂಕಿಯ ಜ್ವಾಲೆ ವಿಪರೀತವಾಗಿ ಹರಡಿತ್ತು. ಆದರೆ ಹೇಗೆ ಬೆಂಕಿ ಹತ್ತಿಕೊಂಡಿದೆ ಎಂಬ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ.

ಇನ್ನು ಬಂಟ್ವಾಳ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ನೀರು ಹಾಯಿಸಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದು, ಜನರನ್ನು ಬಂಟ್ವಾಳ ನಗರ ಠಾಣಾ ಎಸ್ ಐ ರಾಮಕೃಷ್ಣ ಮತ್ತು ತಂಡದವರು ಚದುರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!