ಮಂಗಳೂರು: ಸಂಬಂಧಿಕರ ಮನೆಯಲ್ಲಿ ವಾಸವಿದ್ದ ಯುವತಿ ನಾಪತ್ತೆ
ಮಂಗಳೂರು : ಐದು ವರ್ಷಗಳಿಂದ ನಗರದ ಅಶೋಕನಗರದ ಗೋಕುಲ ಕಲ್ಯಾಣ ಮಂಟಪದ ಬಳಿಯ ಸಂಬಂಧಿಕರ ಮನೆಯಲ್ಲಿ ವಾಸವಿದ್ದ ನವದೆಹಲಿ ಮೂಲದ ದೀಕ್ಷಿತಾ ಅಲಿಯಾಸ್ ರಿಯಾ (20) ನಾಪತ್ತೆಯಾಗಿದ್ದಾರೆ.
ರಿಯಾ ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಕಾರಣ ಆಕೆಯ ಸಂಬಂಧಿಕರು ಆಕೆಯನ್ನು ಸರಿಪಡಿಸಿಕೊಳ್ಳುವಂತೆ ಸಲಹೆ ನೀಡಿದ್ದರು.
ಎಪ್ರಿಲ್.4ರಂದು ಸಂಜೆ 5 ಗಂಟೆಗೆ ಮನೆಯಿಂದ ಹೊರ ಹೋದವಳು ಅಲ್ಲಿಂದ ವಾಪಸ್ ಬಂದಿಲ್ಲ.
ರಿಯಾ 5’1 ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ, ಕೊನೆಯ ಬಾರಿಗೆ ಸಂಬಂಧಿಕರ ಮನೆಯಿಂದ ಹೊರಡುವಾಗ ಹಳದಿ/ನೀಲಿ ಮಿಶ್ರಿತ ಬಣ್ಣದ ಚೂಡಿದಾರ್ ಧರಿಸಿದ್ದರು. ಆಕೆ ಹಿಂದಿ ಮಾತನಾಡಬಲ್ಲಳು.
ರಿಯಾಳನ್ನು ಕಂಡರೆ ಉರ್ವಾ ಪೊಲೀಸ್ ಠಾಣೆ ಅಥವಾ ಪೊಲೀಸ್ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಲು ವಿನಂತಿಸಲಾಗಿದೆ.





