ಪ್ರೆಸ್ಟೀಟ್ ಕಿಚನ್ ಸ್ಟೋರ್ ಗೋಡೌನ್ ಗೆ ಬೆಂಕಿ ಅವಘಡ
ಗಂಗಾವತಿ: ಹಣ್ಣಿನ ಕೋಲ್ಡ್ ಸ್ಟೋರೆಜ್ ಹಾಗೂ ಪ್ರೆಸ್ಟೀಟ್ ಕಿಚನ್ ಸ್ಟೋರ್ ಗೋಡೌನ್ ಗೆ ಬೆಂಕಿ ಆಕಸ್ಮಿಕ ಬೆಂಕಿ ತಗುಲಿ ಕೋಟ್ಯಾಂತರ ರೂ. ನಷ್ಟವಾಗಿರುವ ಘಟನೆ ನಗರದ ಬನ್ನಿಗಿಡದ ಕ್ಯಾಂಪ್ ನಲ್ಲಿ ಏ.5ರ ಬುಧವಾರ ಮುಂಜಾನೆ ಸಂಭವಿಸಿದೆ.
ಅಕ್ಬರ್ ಸಾಬ ಹಾಗೂ ರಮೇಶ ಮಾರ್ವಾಡಿ ಎಂಬವವರಿಗೆ ಸೇರಿದ ಹಣ್ಣಿನ ಕೋಲ್ಡ್ ಸ್ಟೋರೆಜ್, ಪ್ರೇಸ್ಟೀಜ್ ಕಿಚನ್ ಹಾಗೂ ಎಲೆಕ್ಟ್ರಾನಿಕ್ ಅಂಗಡಿಗಳು ಎಂದು ತಿಳಿದು ಬಂದಿದೆ.
ಗೋಡೌನ್ ನಲ್ಲಿ ಮುಂಜಾನೆ ಬೆಂಕಿ ಅವಘಡ ಸಂಭವಿಸಿದ್ದು, ಇದರಿಂದಾಗಿ ಹಣ್ಣಿನ ಗೋಡೌನ್ ನಲ್ಲಿದ್ದ ಬಾಳೆಹಣ್ಣು, ಪ್ಲಾಸ್ಟಿಕ್ ಟ್ರೇಗಳು, ಟಾಟಾ ಎಸಿ ವಾಹನಗಳು, ಎಸಿ ಹಾಗೂ ನಾಲ್ಕು ಸಿಲಿಂಡರ್ ಗಳೊಂದಿಗೆ ಕೆಲ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಅಂಗಡಿಯಲ್ಲಿ ಕಿಚನ್ ಹಾಗೂ ಎಲೆಕ್ಟ್ರಾನಿಕ್ ಸಾಮಾಗ್ರಿಗಳು ಸಂಪೂರ್ಣವಾಗಿ ಸುಟ್ಟು ಹೋಗಿದೆ ಎನ್ನಲಾಗಿದ್ದು, ಈ ಪರಿಣಾಮ ಕೋಟ್ಯಾಂತರ ರೂ. ನಷ್ಡವಾಗಿದೆ.





