ಮೂವರು ರೌಡಿಶೀಟರ್‌ಗಳ ಬಂಧನ
ಬೆಂಗಳೂರು: ಕಳೆದ ಹತ್ತು ವರ್ಷಗಳಿಂದ ಪೊಲೀಸರ ಕೈಗೆ ಸಿಗದಂತೆ ನಾಪತ್ತೆಯಾಗಿದ್ದ ಮೂವರು ರೌಡಿಶೀಟರ್‌ಗಳನ್ನು ಬಂಧಿಸುವಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಖತಾರ್ನಾಕ್ ರೌಡಿಶೀಟರ್‌ಗಳಾದ ಮಹಮ್ಮದ್ ಜಬೀವುದ್ದೀನ್, ಮಹಮ್ಮದ್ ಮೆಹತಾಬ್ ಹಾಗೂ ದಿನೇಶ್ ಬಂಧಿತ ರೌಡಿಗಳು.
ಈ ಮೂವರ ಮೇಲೆ ಬರೋಬ್ಬರಿ ಅರವತ್ತಕ್ಕೂ ಹೆಚ್ಚು ಕೇಸ್‌ಗಳಿದ್ದು, ಪೊಲೀಸರ ಕೈಗೆ ಸಿಗದಂತೆ ಓಡಾಡುತ್ತಿದ್ದರು. ಇಂತಹವರನ್ನೇ ಟಾರ್ಗೆಟ್ ಮಾಡಿ ಹುಡುಕಾಟ ನಡೆಸಿದ ಸಿಸಿಬಿ ಕೊನೆಗೂ ಮೂವರನ್ನು ಖೆಡ್ಡಗೆ ಬೀಳಿಸಿಕೊಂಡಿದೆ.





