December 16, 2025

ದಾಖಲೆ‌ ಇಲ್ಲದೇ ಸಾಗಿಸುತ್ತಿದ್ದ 40 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡ ಚೆಕ್ ಪೋಸ್ಟ್ ಪೊಲೀಸರು

0
image_editor_output_image-2005651348-1680651939048.jpg

ಬೆಳಗಾವಿ: ದಾಖಲೆ‌ ಇಲ್ಲದೇ ಸಾಗಿಸುತ್ತಿದ್ದ 40 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ಖಾನಾಪುರ ತಾಲೂಕಿನ ನಂದಗಡ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹಳಿಯಾಳದಿಂದ ಕಕ್ಕೇರಿಗೆ ಕಾರಿನಲ್ಲಿ ಸಾಗಿಸುತ್ತಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 21.25 ಲಕ್ಷ ರೂ.‌ಮೌಲ್ಯದ 395 ಗ್ರಾಂ‌ ಚಿನ್ಮಾಭರಣ ಹಾಗೂ 19 ಲಕ್ಷ ರೂ.‌ಮೌಲ್ಯದ 28 ಕೆ.ಜಿ. ಬೆಳ್ಳಿಯ ಆಭರಣ, ಕಾರು ವಶಕ್ಕೆ ಪಡೆದುಕೊಂಡಿದ್ದಾರೆ.

ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬೆಳಗಾವಿಯ ಹಲವು ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಹಾಕಲಾಗಿದ್ದು, ಈ ಪೈಕಿ ಹಳಿಯಾಳದಿಂದ ಕಕ್ಕೇರಿಗೆ ಸಾಗಿಸುತ್ತಿದ್ದ ಈ ಚಿನ್ನಾಭರಣದ ದಾಖಲೆಗಳು ಇರಲಿಲ್ಲ. ಪೊಲೀಸರು ತಪಾಸಣೆ ನಡೆಸಿ ಚಿನ್ನಾಭರಣ ಹಾಗೂ ಕಾರು ವಶಕ್ಕೆ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!