ಪುತ್ತೂರು: ನಿರ್ಮಾಣ ಹಂತದಲ್ಲಿರುವ ಸ್ವಂತ ಮನೆಯ ಶೌಚಾಲಯದಲ್ಲಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಈಶ್ವರಮಂಗಲ ಮುಂಡ್ಯ ಎಂಬಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ರವಿರಾಜ್(31) ಎನ್ನಲಾಗಿದೆ. ರವಿರಾಜ್ ರವರು ಬೆಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.