ನವಜಾತ ಹೆಣ್ಣು ಶಿಶುವನ್ನು ಕಚ್ಚಿಕೊಂಡು ಹೋದ ನಾಯಿ: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಘಟನೆ

ಶಿವಮೊಗ್ಗ: ನವಜಾತ ಹೆಣ್ಣು ಶಿಶುವನ್ನು ಪೋಷಕರು ಬಿಟ್ಟು ಹೋದ ಪರಿಣಾಮದಿಂದ ಶ್ವಾನವೊಂದು ಶಿಶುವನ್ನು ಕಚ್ಚಿಕೊಂಡು ಆಸ್ಪತ್ರೆಯ ಆವರಣದಲ್ಲಿ ಓಡಾಡಿರುವ ಘಟನೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ.
ಘಟನೆ ಕುರಿತು ದೊಡ್ಡಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಶ್ವಾನವೊಂದು ನವಜಾತ ಶಿಶುವನ್ನು ಕಚ್ಚಿಕೊಂಡು ಹೆರಿಗೆ ವಾರ್ಡ್‌ನ ಆವರಣದಲ್ಲಿ ಓಡಾಡಿದೆ. ಇದನ್ನು ಗಮನಿಸಿದ ನಾಗರಿಕರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಭದ್ರತಾ ಸಿಬ್ಬಂದಿ ನಾಯಿಯನ್ನು ಓಡಿಸಿದ್ದು, ಶಿಶುವನ್ನು ರಕ್ಷಣೆ ಮಾಡಲಾಯಿತ್ತು.
ಆದರೆ ಭದ್ರತಾ ಸಿಬ್ಬಂದಿ ವೈದ್ಯರ ಬಳಿ ಶಿಶುವನ್ನು ಕೊಂಡು ಹೋಗಿ ತಪಾಸಣೆ ಬಳಿಕ ಶಿಶು ಮೃತಪಟ್ಟಿರುವ ಬಗ್ಗೆ ವೈದ್ಯರು ದೃಢಪಡಿಸಿದರು. ಜನಿಸಿದ ತಕ್ಷಣ ಮಗುವನ್ನು ಯಾರೋ ವಾರ್ಡ್ ಹಿಂಭಾಗದಲ್ಲಿ ಬಿಟ್ಟು ಹೋಗಿದ್ದಾರೆ. ಇದರಿಂದ ನಾಯಿ ಶಿಶುವನ್ನುಕಚ್ಚಿಕೊಂಡು ಓಡಾಡಿದೆ. ಮಗುವನ್ನು ಬಿಟ್ಟು ಹೋದ ಪೋಷಕರ ಪತ್ತೆ ಹೆಚ್ಚುವಂತೆ ಆಸ್ಪತ್ರೆಯ ಸಿಬ್ಬಂದಿ ಆಗ್ರಹಿಸಿದ್ದಾರೆ.