March 22, 2026

8 ವರ್ಷದ ಬಾಲಕ ನದೀಂ ಕೊಲೆ‌ ಪ್ರಕರಣ: ಸೈಕೋ ಕಿಲ್ಲರ್ ರವಿ ಬಂಧನ

0
image_editor_output_image636004100-1680477667781.jpg

ಹುಬ್ಬಳ್ಳಿ: ಹುಬ್ಬಳ್ಳಿಯ ಬಂಡಿಗೆರೆಯಲ್ಲಿ 5 ರೂಪಾಯಿ ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ಎಂಟು ವರ್ಷದ ಮಗುವಿನ ತಲೆಗೆ ಕಲ್ಲಿನಿಂದ ಚಚ್ಚಿ ಹತ್ಯೆಗೈದ ಘಟನೆ ನಡೆದಿದೆ.

ಮಾ.30ರಂದು ನಡೆದಿದ್ದ ಈ ಭೀಕರ ಕೊಲೆ ಬೇಧಿಸಿದ ಪೊಲೀಸರಿಗೆ ಅಚ್ಚರಿಯಾಗಿದ್ದು, ಎಂಟು ವರ್ಷದ ನದೀಂ ಎನ್ನುವ ಬಾಲಕ ಶಾಲೆ ರಜೆ ಕೊಟ್ಟಿದ್ದರಿಂದ ಬೆಂಡಿಗೇರಿ ಪೊಲೀಸ್ ಠಾಣೆಯ ಹತ್ತಿರವಿರುವ ದೊಡ್ಮನಿ ಕಾಲೋನಿಯಲ್ಲಿನ ಅಜ್ಜಿ ಮನೆಗೆಂದು ಬಂದಿದ್ದು, ಈ ವೇಳೆ ಸೈಕೋ ಕಿಲ್ಲರ್ ರವಿ ಬಳ್ಳಾರಿ ಎಂಬ ವ್ಯಕ್ತಿ ಕೇವಲ 5 ರೂಪಾಯಿ ಕೇಳಿದ್ದಕ್ಕೆ ಮಗುವನ್ನು ಕೊಲೆ ಮಾಡಿ ಬಳಿಕ ಮಗುವಿನ ಶವವನ್ನು ಮಿರ್ಚಿ ಗ್ರೌಂಡ್ ಕಂಟಿಯಲ್ಲಿ ಎಸೆದು ಹೋಗಿದ್ದ ಎಂದು ತಿಳಿದುಬಂದಿದೆ.

ಎರಡು ದಿನಗಳ ಹಿಂದೆ ಬಾಲಕ ನದೀಂನನ್ನು ಕೊಲೆ ಮಾಡಿ ಪರಾರಿಯಾಗಿದ್ದ ರವಿ ಬಳ್ಳಾರಿಯನ್ನು ಬೆಂಡಿಗೇರಿ ಪೊಲೀಸರು ಇದೀಗ ಬಲೆಗೆ ಬಿದ್ದಿದ್ದು, ಐದು ರೂಪಾಯಿ ಕೇಳಿದ್ದಕ್ಕೆ ಮಗುವನ್ನು ಕೊಲೆ ಮಾಡಿದ್ದೇನೆ ಎಂದು ತನಿಖೆ ವೇಳೆ ಆರೋಪಿ ರವಿ ಬಳ್ಳಾರಿ ಒಪ್ಪಿಕೊಂಡಿದ್ದಾನೆ.

Leave a Reply

Your email address will not be published. Required fields are marked *

error: Content is protected !!