February 3, 2026

ಕಾಸರಗೋಡು: ಲಾರಿಯಲ್ಲಿ ಭಾರೀ ಪ್ರಮಾಣದ ಸ್ಪಿರಿಟ್ ಸಾಗಾಟ ಪತ್ತೆ:
ಒಬ್ಬ ಆರೋಪಿ ಅಬಕಾರಿ ದಳದ ವಶಕ್ಕೆ

0
Screenshot_2021-11-20-10-28-10-41_680d03679600f7af0b4c700c6b270fe7.jpg

ಕಾಸರಗೋಡು: ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಭಾರೀ ಪ್ರಮಾಣದ ಸ್ಪಿರಿಟ್ ಮತ್ತು ಮದ್ಯವನ್ನು ಕಾಸರಗೋಡು ಅಬಕಾರಿ ದಳದ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದು, ಓರ್ವನನ್ನು ಬಂಧಿಸಿದ್ದಾರೆ.

ಬಂಧಿತನನ್ನು ಮಲಪ್ಪುರಂನ ಸಿ.ವಿ ಸೈನುದ್ದಿನ್ (35) ಎಂದು ಗುರುತಿಸಲಾಗಿದೆ.
ಅಬಕಾರಿ ದಳಕ್ಕೆ ಲಭಿಸಿದ ಮಾಹಿತಿಯಂತೆ ಭಾನುವಾರ ಬೆಳಿಗ್ಗೆ ಬೇಕಲ ಸಮೀಪದ ಪಳ್ಳಿಕೆರೆಯಿಂದ ಅಕ್ರಮ ಸಾಗಾಟ ಪತ್ತೆ ಹಚ್ಚಲಾಗಿದ್ದು, ಟೋರಸ್ ಲಾರಿಯಲ್ಲಿ ಸಾಗಾಟ ಮಾಡಲಾಗುತಿತ್ತು. ಲಾರಿಯಿಂದ 1890 ಲೀಟರ್ ಸ್ಪಿರಿಟ್ ಹಾಗೂ1323 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನು ಗೋವಾ ದಿಂದ ಮಲಪ್ಪುರಂಗೆ ಸಾಗಾಟ ಮಾಡುತ್ತಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!