March 22, 2026

ಮಂಗಳೂರು: ಬೈಕ್ ಕಳವು ಮಾಡಿ ಸಂಚರಿಸುತ್ತಿದ್ದ ಇಬ್ಬರು ಆರೋಪಿಗಳ ಸೆರೆ

0
image_editor_output_image-1433489886-1680068887977.jpg

ಮಂಗಳೂರು: ಬೈಕ್ ಕಳವು ಮಾಡಿ ಅದರಲ್ಲಿ ಸಂಚರಿಸುತ್ತಿದ್ದ ಇಬ್ಬರನ್ನು ಮಂಗಳೂರು ಪೂರ್ವ ಠಾಣೆಯ ಪೊಲೀಸರು ಬಂಧಿಸಿ ಎರಡು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಜೋಗಿಮಟ್ಟಿ ಸ್ಟೇಡಿಯಂ ಸರ್ಕಲ್ ಬಳಿಯ ನಿವಾಸಿ ಫಾರಿಶ್ ಶರ್ಮಾ ಅಲಿಯಾಸ್ ಗಿಲ್ಲು (19) ಹಾಗೂ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಐಯುಡಿಪಿ ಲೇಔಟ್ 3ನೇ ಕ್ರಾಸ್ ನಿವಾಸಿ ಧನುಷ್ (20) ಬಂಧಿತ ಆರೋಪಿಗಳು.

ಮಾರ್ಚ್ 28ರಂದು ಮಂಗಳೂರು ನಗರದ ಮಲ್ಲಿಕಟ್ಟೆಯ ಬಳಿ ಬೈಕ್ ಸವಾರರಿಬ್ಬರು ಸಂಶಯಾಸ್ಪದವಾಗಿ ಕಂಡು ಬಂದಿದ್ದರು. ಅವರನ್ನು ತಡೆದು ಪರಿಶೀಲಿಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!