February 3, 2026

BJP ಪಕ್ಷವನ್ನು ಕಟ್ಟಿ ಬೆಳೆಸಿದ ನನ್ನ ತಂದೆಯನ್ನು ಮರೆಯುತ್ತಿದೆ: BJP ವಿರುದ್ಧ ಅನಂತಕುಮಾರ್‌ ಪುತ್ರಿ ವಿಜೇತಾ ಬೇಸರ

0
image_editor_output_image-1971150521-1680045281636.jpg

ಬೆಂಗಳೂರು:’ಭಾರತೀಯ ಜನತಾ ಪಕ್ಷ(ಬಿಜೆಪಿ)ವನ್ನು ಕಟ್ಟಿ ಬೆಳೆಸಿದ ನನ್ನ ತಂದೆಯನ್ನು ಮರೆಯುತ್ತಿರುವ ಆ ಪಕ್ಷವೀಗ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದು ಮಾಜಿ ಕೇಂದ್ರ ಸಚಿವ ದಿ. ಅನಂತಕುಮಾರ್‌ ಪುತ್ರಿ ವಿಜೇತಾ ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಬಿಜೆಪಿ ನಾಯಕರ ಕುರಿತಾದ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ‘ನನ್ನ ತಂದೆ 1987ರಲ್ಲಿ ಬಿಜೆಪಿ ಸೇರಿದ್ದರು ಮತ್ತು ಅವರ ಕೊನೆ ಉಸಿರಿನ ತನಕವೂ ಬಿಜೆಪಿಗಾಗಿ ದುಡಿದಿದ್ದರು.

ರಸ್ತೆ, ರೈಲು ಮಾರ್ಗಗಳಲ್ಲಿ ಅವರ ಹೆಸರಿಡುವ ಮೂಲಕ ಅವರ ಕೊಡುಗೆ ಗುರುತಿಸದಿರುವುದು ವಿಚಿತ್ರ. ಅವರು ಇಂದಿಗೂ ಲಕ್ಷಾಂತರ ಜನರ ಹೃದಯದಲ್ಲಿ ನೆಲೆಸಿದ್ದಾರೆ. ಅವರನ್ನು ಮರೆಯುತ್ತಿರುವ ಪಕ್ಷಕ್ಕೆ ಆತ್ಮಾವಲೋಕನ ಅಗತ್ಯ’ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!