8 ವರ್ಷದ ಮಗನನ್ನೇ ಚಾಕುವಿನಿಂದ ಬರ್ಬರವಾಗಿ ಹತ್ಯೆಗೈದ ತಂದೆ: 5 ವರ್ಷಗಳ ಹಿಂದೆ ಪತ್ನಿಯನ್ನು ಕೊಲೆಗೈದು ಜೈಲು ಶಿಕ್ಷೆ ಅನುಭವಿಸಿದ್ದ ಆರೋಪಿ
ಕೋಲಾರ : ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿಯೊಬ್ಬ ತನ್ನ ಅಪ್ರಾಪ್ತ ಮಗನನ್ನು ಚಾಕುವಿನಿಂದ ಬರ್ಬರವಾಗಿ ಹತ್ಯೆಗೈದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದಲ್ಲಿ ನಡೆದಿದೆ.
ಭುವನ್ (8) ಕೊಲೆಯಾದ ಬಾಲಕ ಹಾಗೂ ಸುಬ್ರಹ್ಮಣ್ಯಂ ಎಂಬಾತ ಕೊಲೆಗೈದ ಆರೋಪಿ. ಈತ 5 ವರ್ಷಗಳ ಹಿಂದೆ ತನ್ನ ಪತ್ನಿಯನ್ನು ಕೊಲೆ ಮಾಡಿ ಜೈಲಿಗೆ ಹೋಗಿ ಬಂದಿದ್ದ.
ಆದರೆ ಸೋಮವಾರ ಬೆಂಗಳೂರಿನಿಂದ ಬಂದ ಸುಬ್ರಹ್ಮಣ್ಯಂ ಮಧ್ಯಾಹ್ನ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಮಗ ಭುವನ್ ಅನ್ನು ಕರೆದುಕೊಂಡು ಬಂದಿದ್ದಾನೆ.
ಶಾಲೆಯಿಂದ ಕರೆತಂದ ಸುಬ್ರಹ್ಮಣ್ಯಂ ಕೋಲಾರದ ಗದ್ದೆಕಣ್ಣೂರು ಬಳಿ ಕರೆದುಕೊಂಡು ಬಂದು ಭೀಕ್ಷೆ ಬೇಡಲು ಬಿಟ್ಟಿದ್ದ. ಶಾಲೆಯ ಸಮವಸ್ತ್ರ ಧರಿಸಿದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸಾರ್ವಜನಿಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.





