ನಾಡಬಾಂಬ್ ಎಸೆದು BJP ಮುಖಂಡನ ಬರ್ಬರವಾಗಿ ಹತ್ಯೆ
ಪುದುಚೇರಿ: ಬಿಜೆಪಿ ಮುಖಂಡನ ಮೇಲೆ ದುಷ್ಕರ್ಮಿಗಳ ಗುಂಪೊಂದು ನಾಡಬಾಂಬ್ ಎಸೆದು ಬರ್ಬರವಾಗಿ ಹತ್ಯೆಗೈದ ಘಟನೆ ಪುದುಚೇರಿಯಲ್ಲಿ ನಡೆದಿದೆ.
ಬಿಜೆಪಿ ಮುಖಂಡ ಸೆಂಥಿಲ್ ಕುಮಾರ್ ಮೃತ ವ್ಯಕ್ತಿ. ಭಾನುವಾರ ರಾತ್ರಿ ವಿಲಿಯನೂರು ಹಾಗೂ ಪುದುಚೇರಿ ರಸ್ತೆಯ ಬದಿಯ ಅಂಗಡಿಯೊಂದರಲ್ಲಿ ಚಹಾ ಸೇವಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಸೆಂಥಿಲ್ ಕುಮಾರ್ ಮೇಲೆ ನಾಡಬಾಂಬ್ ಎಸೆದಿದ್ದಾರೆ. ನಂತರ ಸೆಂಥಿಲ್ ಕುಮಾರ್ ಬಳಿ ಹೋಗಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದಿದ್ದಾರೆ.




