ಮಂಗಳೂರು: ಎಂ.ಫ್ರೆಂಡ್ಸ್ ಕಾರುಣ್ಯಕ್ಕೆ ಝಕರಿಯಾ ಜೋಕಟ್ಟೆ ಅವರಿಂದ ರಂಝಾನ್ ತಿಂಗಳ ಪ್ರಾಯೋಜಕತ್ವ
ಮಂಗಳೂರಿನ ವೆನ್ಲಾಕ್ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಎಂ.ಫ್ರೆಂಡ್ಸ್ ಚಾರಿಟೇಬಲ್ ವತಿಯಿಂದ ರೋಗಿಗಳ ಸಹವರ್ತಿಗಳಿಗೆ ಪ್ರತಿನಿತ್ಯ ನೀಡುತ್ತಿರುವ ರಾತ್ರಿಯ ಭೋಜನ ವ್ಯವಸ್ಥೆಗೆ ರಂಝಾನ್ ಪೂರ್ತಿ ಒಂದು ತಿಂಗಳ ಪ್ರಾಯೋಜಕತ್ವವನ್ನು ಸೌದಿ ಅರೇಬಿಯಾ ಅಲ್ ಮುಝೈನ್ ಕಂಪೆನಿ ಸಿಇಒ ಝಕರಿಯಾ ಜೋಕಟ್ಟೆ ಪ್ರಾಯೋಜಿಸಿದ್ದಾರೆ.
ಭಾನುವಾರ (26/03) ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿ ಚಾಲನೆ ನೀಡಿದ ಝಕರಿಯಾ ಜೋಕಟ್ಟೆ ಅವರು ದಾನದ ಮೂಲಕ ಜೀವನ ಪಾವನ ಮಾಡುವ ಕೆಲಸ ನಡೆದಾಗ ಸಮಾಜ ಸಂತೃಪ್ತಿ ಹೊಂದುವುದು. ಉಲ್ಲವರು ಇಲ್ಲದವರಿಗೆ ಕೊಡುವುದರಿಂದ ದೇವನ ಅನುಗ್ರಹ ಪಡೆಯಬೇಕು ಎಂದು ಹೇಳಿದರು.
ಎಂ.ಫ್ರೆಂಡ್ಸ್ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಎಂ.ಫ್ರೆಂಡ್ಸ್ ಟ್ರಸ್ಟಿಗಳಾದ ಮುಸ್ತಫಾ ಭಾರತ್, ಮಹಮ್ಮದಲಿ ಕಮ್ಮರಡಿ, ಅನ್ವರ್ ಹುಸೈನ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ ಸ್ವಾಗತಿಸಿದರು. ಕಾರ್ಯದರ್ಶಿ ಆರಿಫ್ ಪಡುಬಿದ್ರಿ ವಂದಿಸಿದರು. ಎಂ.ಫ್ರೆಂಡ್ಸ್ ಕಳೆದ ಐದೂವರೆ ವರ್ಷಗಳಿಂದ ಕಾರುಣ್ಯ ಯೋಜನೆಯ ಮೂಲಕ ಪ್ರತಿನಿತ್ಯ ನಾಲ್ಕುನೂರರಿಂದ ಐನೂರು ಮಂದಿಗೆ ರಾತ್ರಿಯ ಉಚಿತ ಭೋಜನವನ್ನು ದಿನನಿತ್ಯ ನೀಡುತ್ತಿದ್ದು, ಮಾಸಿಕ ಎರಡೂ ಕಾಲು ಲಕ್ಷ ರೂ. ವ್ಯಯಿಸುತ್ತಿದೆ. ಝಕರಿಯಾ ಜೋಕಟ್ಟೆ ಅವರು ಕಳೆದ ವರ್ಷದಿಂದ ಪ್ರತಿ ರಂಝಾನ್ ತಿಂಗಳಲ್ಲಿ ತಮ್ಮ ಪ್ರಾಯೋಜಕತ್ವ ವಹಿಸುತ್ತಿದ್ದಾರೆ.




