May 10, 2026

ಉಳ್ಳಾಲ: ನೇಣುಬಿಗಿದು ಯುವಕ ಆತ್ಮಹತ್ಯೆ

0
IMG-20230325-WA0061.jpg

ಉಳ್ಳಾಲ: ಮೊಬೈಲ್ ಶೋರೂಂವೊಂದರಲ್ಲಿ ಕೆಲಸಕ್ಕಿದ್ದ ಕುಂಪಲ ಮೂರು ಕಟ್ಟೆ ನಿವಾಸಿ ಯುವಕನೊಬ್ಬ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಅಕ್ಷಯ್ (25) ಆತ್ಮಹತ್ಯೆ ಮಾಡಿಕೊಂಡ ಯುವಕ. ತಾಯಿ ಬೀಡಿ ಬ್ರಾಂಚಿಗೆ ತೆರಳಿದ್ದ ವೇಳೆ ಮನೆಯ ಕಿಟಕಿಗೆ ಬೈರಾಸಿನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌. ಅವರು ತೊಕ್ಕೊಟ್ಟಿನ ಅನು ಮೊಬೈಲ್ ಸೆಂಟರಲ್ಲಿ ಕೆಲಸಕ್ಕಿದ್ದು ಕಳೆದ 20 ದಿನಗಳಿಂದ ಕೆಲಸಕ್ಕೆ ತೆರಳದೆ ಮನೆಯಲ್ಲೇ ಉಳಿದಿದ್ದರು. ಮೊಬೈಲ್ ಶಾಪ್ ಮಾಲಕರು ಕರೆ ಮಾಡಿದರೂ ಅಕ್ಷಯ್ ಕರೆ ಸ್ವೀಕರಿಸುತ್ತಿರಲಿಲ್ಲ.

ಖಿನ್ನತೆಯಿಂದ ಅಕ್ಷಯ್ ಆತ್ಮಹತ್ಯೆಗೈದಿರುವುದಾಗಿ ಹೇಳಲಾಗುತ್ತಿದೆ. ಮೃತ ಅಕ್ಷಯ್ ತಾಯಿ, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ‌.

Leave a Reply

Your email address will not be published. Required fields are marked *

error: Content is protected !!