ಆನ್‌ಲೈನ್ ಗಾಂಜಾ ಮಾರಾಟ:
ಅಮೆಜಾನ್ ಇಂಡಿಯಾ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲು
ನವದೆಹಲಿ: ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಪೊಲೀಸರು ಆನ್‌ಲೈನ್ ಗಾಂಜಾ ಮಾರಾಟ ದಂಧೆಯನ್ನು ಭೇದಿಸಿದ ನಂತರ ಅಮೆಜಾನ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ದೇಶದಲ್ಲಿ ಎಎಸ್‌ಎಸ್‌ಎಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಮೆಜಾನ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕರ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್(ಎನ್‌ಡಿಪಿಎಸ್) ಕಾಯ್ದೆಯ ಸೆಕ್ಷನ್ 38ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಭಿಂಡ್ ಪೊಲೀಸ್ ಅಧೀಕ್ಷಕ ಮನೋಜ್ ಕುಮಾರ್ ಸಿಂಗ್ ಹೇಳಿದ್ದಾರೆ.
ಎಫ್‌ಐಆರ್‌ನಲ್ಲಿ ಯಾವುದೇ ನಿರ್ದಿಷ್ಟ ವ್ಯಕ್ತಿಯ ಹೆಸರಿಲ್ಲ ಎಂದು ಹೇಳಿದರು. ನವೆಂಬರ್ 13ರಂದು ಗ್ವಾಲಿಯರ್ ನಿವಾಸಿಗಳಾದ ಬಿಜೇಂದ್ರ ತೋಮರ್ ಮತ್ತು ಸೂರಜ್ ಅಲಿಯಾಸ್ ಕಲ್ಲು ಪಾವಯ್ಯ ಅವರಿಂದ 21.7 ಕೆಜಿ ಗಾಂಜಾ ವಶಪಡಿಸಿಕೊಂಡ ನಂತರ ಜಿಲ್ಲೆಯ ಗೋಹಾಡ್ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಪಿ ಹೇಳಿದರು.





