ಬೆಳ್ತಂಗಡಿ: ಕುಟುಂಬಸ್ಥರ ಜೊತೆ ಧರ್ಮಸ್ಥಳಕ್ಕೆ ಸಂದರ್ಶಿಸಲು ಬಂದಿದ್ದ ಯುವತಿ ನಾಪತ್ತೆ
ಬೆಳ್ತಂಗಡಿ : ಕುಟುಂಬಸ್ಥರ ಜೊತೆ ಉತ್ತರ ಕನ್ನಡದಿಂದ ದಕ್ಷಿಣ ಕನ್ನಡದ ಶ್ರೀ ಕ್ಷೇತ್ರಗಳನ್ನು ಸಂದರ್ಶಿಸಲು ಬಂದಿದ್ದ ಹದಿ ಹರೆಯದ ಯುವತಿ ನಾಪತ್ತೆಯಾಗಿದ್ದಾಳೆ.
ಉತ್ತರ ಕನ್ನಡ ಜಿಲ್ಲೆಯ ಮಿರ್ಜಾನ್ ,ದೇವಸ್ಥಾನ ಕೇರಿಯ ಹರಿಹರ ಕೃಪಾ ನಿವಾಸಿ ರೇಷ್ಮಾ.ಆರ್.ನಾಯ್ಕ್ (23) ಎಂಬಾಕ್ಕೆ ನಾಪತ್ತೆಯಾದ ಯುವತಿಯಾಗಿದ್ದಾಳೆ.
ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ದೇವರ ದರ್ಶನ ಬಳಿಕ ಎಲ್ಲರೂ ರೂಂ ಹೋಗಿದ್ದ ನಂತರ ರಾತ್ರಿ ಏಕಾಏಕಿ ಯುವತಿ ರೇಶ್ಮಾ ನಾಪತ್ತೆಯಾಗಿದ್ದಾಳೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.




