ಮಂಗಳೂರಿನಲ್ಲಿ ಬೆಳ್ಳಬೆಳಗ್ಗೆ ತಂಪೆರೆದ ಬೇಸಿಗೆ ಮಳೆ
ಮಂಗಳೂರು: ಬಿಸಿ ಬೇಗೆಯಿಂದ ಬಳಲಿದ್ದ ಮಂಗಳೂರಿನಲ್ಲಿ ಇಂದು ಮುಂಜಾನೆ ಮಳೆ ಸುರಿದ್ದು, ಕೊಂಚ ತಂಪಾಗಿರಿಸಿದೆ.
ಕಳೆದ ಕೆಲದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಸುರಿದ್ದು, ಇಂದು ಮುಂಜಾನೆ 6.30ರ ಸುಮಾರಿಗೆ ಮಂಗಳೂರು ನಗರದಲ್ಲಿಆರಂಭವಾದ ಮಳೆ ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ಸುರಿದಿದೆ.
ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ.




