ಮಡಿಕೇರಿ: ಅಂಬೇಡ್ಕರ್ ಝಿಂದಾಬಾದ್ ಘೋಷಣೆ ವೀಡಿಯೊವನ್ನು ತಿರುಚಿ ಪಾಕಿಸ್ತಾನ್ ಝಿಂದಾಬಾದ್ ಸೃಷ್ಟಿ:
ಪತ್ರಕರ್ತ ಹರೀಶ್ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲು
ಮಡಿಕೇರಿ: ಶನಿವಾರ ಸಂತೆಯಲ್ಲಿ ಮುಸ್ಲಿಂ ಮಹಿಳೆಯರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಅಂಬೇಡ್ಕರ್ ಝಿಂದಾಬಾದ್ ಎಂದು ಘೋಷಣೆ ಕೂಗಿದ್ದ ವಿಡಿಯೋ ತಿರುಚಿ ಪಾಕಿಸ್ತಾನ್ ಝಿಂದಾಬಾದ್ ಹೇಳಿದ್ದಾರೆಂದು ಸುಳ್ಳು ಆರೋಪದಲ್ಲಿ ಮೂವರ ಮೇಲೆ ಎಫ್ ಐ ಆರ್ ದಾಖಲಾಗಿದೆ.
ಕನ್ನಡ ಪ್ರಭ ಪತ್ರಿಕೆಯ ಸ್ಥಳೀಯ ವರದಿಗಾರ ಹರೀಶ್, ರಘು ಎಸ್ ಎನ್, ಗಿರೀಶ್ ಆರೋಪಿಗಳು. ಹರೀಶ್ ಸೋಮವಾರಪೇಟೆ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದಾರೆ.
ಪ್ರತಿಭಟನೆಯ ವೇಳೆ ಮುಸ್ಲಿಂ ಮಹಿಳೆಯರು ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ ಎಂದೂ ಪೊಲೀಸರ ಎಫ್ ಐ ಆರ್ ನಲ್ಲಿ ದಾಖಲಾಗಿದೆ.





