March 12, 2026

ವಿಟ್ಲ: ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಶಾಲೆಯಲ್ಲಿ ‘ಕಿಂಡರ್ ಗಾರ್ಡನ್ ಗ್ರಾಜುಯೇಷನ್ ಡೇ’

0
IMG-20230317-WA0024.jpg

ವಿಟ್ಲ: ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಶಾಲೆಯಲ್ಲಿ ಯು.ಕೆ.ಜಿ. ವಿದ್ಯಾರ್ಥಿಗಳಿಗೆ ಕಿಂಡರ್ ಗಾರ್ಡನ್ ಗ್ರಾಜುಯೇಷನ್ ಡೇ ಕಾರ್ಯಕ್ರಮ ನಡೆಯಿತು.

ಎರಡು ವರ್ಷಗಳ ಪೂರ್ವ ಪ್ರಾಥಮಿಕ ಹಂತ ಪೂರ್ಣಗೊಳಿಸಿ 2023-24 ನೇ ಶೈಕ್ಷಣಿಕ ವರ್ಷದಿಂದ 1 ನೇ ತರಗತಿಗೆ ಕಾಲಿಡುತ್ತಿರುವ ಯು.ಕೆ.ಜಿ. ಮಕ್ಕಳಿಗೆ ಜನಪ್ರಿಯ ಸೆಂಟ್ರಲ್ ಶಾಲೆಯಲ್ಲಿ ಅಭಿನಂದಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿಶ್ವ ವಿದ್ಯಾಲಯಗಳಲ್ಲಿ ನಡೆಸುವ ಘಟಿಕೋತ್ಸವ ಮಾದರಿಯಲ್ಲಿ ಮಕ್ಕಳಿಗೆ ಪದವಿ ಪ್ರಧಾನದ ಮೇಲಂಗಿ ಮತ್ತು ಟೋಪಿ ಧರಿಸಲಾಗಿತ್ತು ಹಾಗೆಯೇ ಪೂರ್ವ ಪ್ರಾಥಮಿಕ ಹಂತ ಪೂರ್ಣಗೊಳಿಸಿದ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಎಲ್.ಕೆ.ಜಿ. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಆಡಳಿತ ಮಂಡಳಿ ನಿರ್ದೇಶಕರಾದ ನೌಶೀನ್ ಬದ್ರಿಯಾ ರವರು ವಹಿಸಿದ್ದರು. ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶಕೀರ್ ಅಳಕೆ ಮಜಲುರವರು ಮಾತನಾಡಿ ಡಾಕ್ಟರ್ ಅಬ್ದುಲ್ ಬಷೀರ್ ರವರ ನೇತ್ರತ್ವದಲ್ಲಿ ಕಾರ್ಯಾಚರಿಸುತ್ತಿರುವ ಜನಪ್ರಿಯ ಶಾಲೆಯು ಕೇವಲ ಎರಡು ವರ್ಷದಲ್ಲಿ ವಿಟ್ಲ ಪುತ್ತೂರು ಆಸುಪಾಸಿನಲ್ಲೇ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಉನ್ನತ ಹೆಸರು ಗಳಿಸಿದೆ, ಕಿಂಡರ್ ಗಾರ್ಡನ್ ಗ್ರಾಜುಯೇಷನ್ ಪ್ರಮಾಣ ಪತ್ರ ಸ್ವೀಕರಿಸಿದ ಜನಪ್ರಿಯ ಶಾಲೆಯ ಮಕ್ಕಳು ಮುಂದೆ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಉನ್ನತ ಪದವಿಯನ್ನು ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು. ಶಾಲೆಯ ಮುಖ್ಯ ಶಿಕ್ಷಕಿ ಪ್ರಿಯಾ ದುರೈರಾಜ್, ಆಡಳಿತ ಅಧಿಕಾರಿ ಸಫ್ವಾನ್ ಪಿಲಿಕಲ್ ಮತ್ತಿತರು ಉಪಸ್ಥಿತರಿದ್ದರು.

ಕಾರ್ಯಕ್ರಮದುದ್ದಕ್ಕೂ ಎಲ್. ಕೆ.ಜಿ. ಮಕ್ಕಳೇ ಸ್ವಾಗತ ನಿರೂಪಣೆ ಧನ್ಯವಾದವನ್ನು ಅಚ್ಚುಕಟ್ಟಿನಿಂದ ಮಾಡಿ ಪೋಷಕರ ಗಮನ ಸೆಳೆದರು.

Leave a Reply

Your email address will not be published. Required fields are marked *

You may have missed

error: Content is protected !!