March 12, 2026

ವಿಟ್ಲ: ಪತ್ನಿಯನ್ನು ಜಾತ್ರೆಗೆ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡ ಪತಿ

0
IMG-20230317-WA0021.jpg

ವಿಟ್ಲ: ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವೀರಕಂಭ ಬೆತ್ತಸರವು ಎಂಬಲ್ಲಿ ನಡೆದಿದೆ.

ವೀರಕಂಭ ಬೆತ್ತಸರವು ನಿವಾಸಿ ವಿಶ್ವನಾಥ ಸಪಲ್ಯ (65) ಮೃತ ವ್ಯಕ್ತಿ.

ವಿಶ್ವನಾಥ ಸಪಲ್ಯ ರವರು ಪತ್ನಿಯನ್ನು ಬಲವಂತವಾಗಿ ಜಾತ್ರೆಗೆ ಕಳುಹಿಸಿದ್ದು, ಪತ್ನಿ ಜಾತ್ರೆಗೆ ಹೋಗಿ ಹಿಂತಿರುಗಿ ಬರುವ ವೇಳೆ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.

ವಿಶ್ವನಾಥ ರವರ ಇಬ್ಬರು ಮಕ್ಕಳು ವಿದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮೃತರು ಪತ್ನಿ, ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!