March 12, 2026

ವಿಟ್ಲ: ಲಯನ್ಸ್ ಕ್ಲಬ್ ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮ: ವಿವಿಧ ಸೇವಾ ಚಟುವಟಿಕೆಗಳ ಉದ್ಘಾಟನೆ

0
IMG-20230317-WA0014.jpg

ವಿಟ್ಲ: ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ಲಯನ್ಸ್ ಜಿಲ್ಲಾ ಗವರ್ನರ್ ಅಧಿಕೃರ ಭೇಟಿ ಮತ್ತು ಸೇವಾ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.‌

ಜಿಲ್ಲಾ ಗವರ್ನರ್ ಸಂಜೀತ್ ಶೆಟ್ಟಿ ಅವರು ಬೆಳಿಗ್ಗೆ ವಿವಿಧ ಸೇವಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ, ಸಂಜೆ ಲಯನ್ಸ್ ಸೇವಾ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ ವಿಟ್ಲ ಲಯನ್ಸ್ ಕ್ಲಬ್ ಕಳೆದ ಹಲವಾರು ವರ್ಷಗಳಿಂದ ನಿರಂತರ ಸೇವೆಗಳನ್ನು ನಡೆಸಿಕೊಂಡು ಬಂದು ಜಿಲ್ಲೆಯೇ ಮಾದರಿ ಕ್ಲಬ್ ಆಗಿ ಮೂಡಿ ಎಂದರು.

ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸುದೇಶ್ ಭಂಡಾರಿ ಎರ್ಮೆನಿಲೆ ಮಾತನಾಡಿ ಶಿಕ್ಷಣ, ಆರೋಗ್ಯ, ಬಡವರಿಗೆ ಸಹಾಯಧನವನ್ನು ನೀಡಿದ್ದೇವೆ. ಸೇವಾ ಕಾರ್ಯಕ್ರಮಗಳಿಂದ ಜನರಿಗೆ ತೃಪ್ತಿ ತಂದಿದೆ. ಜಿಲ್ಲೆಯಲ್ಲಿಯೇ ನಮ್ಮ ಕ್ಲಬ್ ಉತ್ತಮ ಕ್ಲಬ್ ಆಗಿ ಮೂಡಿ ಬಂದಿದೆ ಎಂದರು.

ಮಾಜಿ ಜಿಲ್ಲಾ ಗವರ್ನರ್ ಡಾ. ಗೀತಾಪ್ರಕಾಶ್ ಮಾತನಾಡಿ, ಶುಭ ಹಾರೈಸಿದರು. ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ವೇದಾವತಿ, ದೇಜಪ್ಪ ಪೂಜಾರಿ ನಿಡ್ಯ, ಸುರೇಖಾ, ಖುಷಿ ಸಾಲಿಯಾನ್, ಮುರಳೀಧರ ಅವರನ್ನು ಸನ್ಮಾನಿಸಲಾಯಿತು. ಆವತ್ತಿಕಲ್ಲು ಅಂಗಡಿವಾಡಿ ಕೇಂದ್ರಕ್ಕೆ ಜಲಜಾಕ್ಷಿ ಮತ್ತು ಬಾಲಕೃಷ್ಣ ಅವರಿಂದ ಮಿಕ್ಸರ್ ಕೊಡುಗೆ ನೀಡಲಾಯಿತು. ಡಾ. ಇರ್ಮಾಡಿ ಶರಚ್ಚಂದ್ರ ಶೆಟ್ಟಿ ಅವರಿಂದ ನಿಕೀತ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸೇವಾ ಚಟುವಟಿಕೆಗಳನ್ನು ವಿತರಿಸಲಾಯಿತು.‌

ಬೆಳಿಗ್ಗೆ ಸಂತೋಷ್ ಕುಮಾರ್ ಶೆಟ್ಟಿ ಪೆಲ್ತಡ್ಕ ಅವರ ಮೂಲಕ ಕೆಲಿಂಜ ಸರಕಾರಿ ಶಾಲೆಗೆ ಪೀಠೋಪಕರಣ ವಿತರಿಸಲಾಯಿತು. ದಿ.ನಳಿನಿ ಅವರ ಸ್ಮರಣಾರ್ಥವಾಗಿ ಅವರ ಪತಿ ಮತ್ತು ಮಕ್ಕಳು ಸೇವಾ ಕೌಂಟರ್ ಅನ್ನು ವಿಟ್ಲ ಶ್ರೀ ಅಯ್ಯಪ್ಪ ದೇವಸ್ಥಾನಕ್ಕೆ ಹಸ್ತಾಂತರ ಮಾಡಲಾಯಿತು.

ಸಂತೋಷ್ ಕುಮಾರ್ ಶೆಟ್ಟಿ ಪೆಲ್ತಡ್ಕ, ರಾಜೇಶ್ ತೋಡ್ಲಾ, ಪುಷ್ಪಲತಾ ಅವರ ಮೂಲಕ ಒಟ್ಟು 1.75 ಲಕ್ಷ…ಕಂಚಿನ ಹೊದಿಕೆ ನೀಡಲಾಯಿತು. ಜಿಲ್ಲಾ ಲಯನ್ಸ್ ಕೊಡಂಗಾಯಿ ಸರಕಾರಿ ಶಾಲೆಗೆ ಕಂಪ್ಯೂಟರ್, ರಜಿತ್ ಆಳ್ವ ಅವರಿಂದ ಪೀಠೋಪಕರಣ, ಅರವಿಂದ ರೈ ಮೂರ್ಜೆಬೆಟ್ಟು ಅವರಿಂದ ನಾಮಫಲಕ , ಲಯನ್ಸ್ ಕ್ಲಬ್
ವತಿಯಿಂದ ಕ್ಷಯ ರೋಗ ಪೀಡಿತರಿಗೆ ಪೌಷ್ಟಿಕ ಆಹಾರಗಳ ಕಿಟ್ ವಿತರಿಸಲಾಯಿತು.

ಈ ಸಂದರ್ಭ ಉಪರಾಜ್ಯಪಾಲೆ ಭಾರತಿ, ಪ್ರಾಂತಿಯ ಅಧ್ಯಕ್ಷ ಲಕ್ಷ್ಮಣ ಕುಲಾಲ್ ಅಗ್ರಬೈಲು, ವಲಯಾಧ್ಯಕ್ಷ ಶಿವಾನಂದ ನೂಜಿಪ್ಪಾಡಿ, ಗವರ್ನರ್ ಕಾರ್ಯದರ್ಶಿ ಅನಿಲ್ ಕುಮಾರ್, ಪ್ರಗತಿ ಎಸ್ ಸಂಜೀತ್ ಶೆಟ್ಟಿ, ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಜಲಜಾಕ್ಷಿ, ಕೋಶಾಧಿಕಾರಿ ರವಿಶಂಕರ್ , ಮಾಜಿ ಅಧ್ಯಕ್ಷ ಮೋನಪ್ಪ ಗೌಡ, ಲಿಯೋ ಅಧ್ಯಕ್ಷೆ ಯುಕ್ತಾ, ಮೊದಲಾದವರು ಉಪಸ್ಥಿತರಿದ್ದರು.

ಸಂತೋಷ್ ಕುಮಾರ್ ಶೆಟ್ಟಿ ಪೆಲ್ತಡ್ಕ, ಮಂಗೇಶ್ ಭಟ್ ವಿಟ್ಲ, ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಸಿಂಧೂ ಶೆಟ್ಟಿ, ಗಾಯಂತ್ರಿ ಗೀತಾಪ್ರಕಾಶ್, ಯುಕ್ತಾ ಡಿ, ಲೂಯಿಸ್ ಮಸ್ಕರೇಂಞಸ್, ಗಂಗಾಧರ್ ವಿಟ್ಲ, ಮೋಹನ್ ಮಾಸ್ತರ್, ದೇವಿಪ್ರಸಾದ್ ಶೆಟ್ಟಿ, ವಿವಿಧ ಜವಾಬ್ದಾರಿ ನಿರ್ವಹಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!