February 3, 2026

ಭಾರತದಲ್ಲಿ ನಕ್ಸಲ್ ಹಿಂಸಾಚಾರ ಶೇ. 77 ರಷ್ಟು ಕಡಿಮೆಯಾಗಿದೆ: ಕೇಂದ್ರ ಸರ್ಕಾರ ಮಾಹಿತಿ

0
20230314_192526.jpg

ನವದೆಹಲಿ; ಭಾರತದಲ್ಲಿ ನಕ್ಸಲ್ ಹಿಂಸಾಚಾರ ಶೇ 77ರಷ್ಟು ಕಡಿಮೆಯಾಗಿದ್ದು, ಇದರಿಂದ ಸಾವಿನ ಪ್ರಮಾಣವೂ ಶೇ 90ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಗೆ ತಿಳಿಸಿದೆ.

ನಕ್ಸಲ್‌ ಹಿಂಸಾಚಾರ ಗಣನೀಯವಾಗಿ ಕಡಿಮೆಯಾಗಿದ್ದು, 2022 ರಲ್ಲಿ 45 ಜಿಲ್ಲೆಗಳ 176 ಪೊಲೀಸ್ ಠಾಣೆಗಳು ಮಾತ್ರ ಈ ಸಂಬಂಧಿತ ಹಿಂಸಾಚಾರವನ್ನು ವರದಿ ಮಾಡಿವೆ.

ಇನ್ನು 2010 ರಲ್ಲಿ 96 ಜಿಲ್ಲೆಗಳ ಕನಿಷ್ಠ 465 ಪೊಲೀಸ್ ಠಾಣೆಗಳು ನಕ್ಸಲ್‌ ಸಂಬಂಧಿತ ಹಿಂಸಾಚಾರವನ್ನು ವರದಿ ಮಾಡಿದ್ದವು ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!