September 26, 2026

ಮಂಗಳೂರು: ಪಿಕಪ್ ವಾಹನ ಹಾಗೂ ಒಮ್ನಿ ನಡುವೆ ಅಪಘಾತ: ಒಮ್ನಿ ಚಾಲಕ ಮೃತ್ಯು

0
IMG-20230313-WA0025.jpg

ಮಂಗಳೂರು: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತಲಪಾಡಿ ಎಂಬಲ್ಲಿ ಪಿಕಪ್ ವಾಹನ ಹಾಗೂ ಒಮ್ನಿ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕಾರು ಚಾಲಕ ಮೃತಪಟ್ಟಿದ್ದಾರೆ.

ಮೃತರನ್ನು ಬ್ರಹ್ಮರಕೋಟ್ಲು ನಿವಾಸಿ ರಾಜೇಶ್ ಶೆಟ್ಟಿ (50) ಎಂದು ಗುರುತಿಸಲಾಗಿದೆ.

 

ವಿರುದ್ದ ದಿಕ್ಕಿನಲ್ಲಿ ಬಂದ ಪಿಕಪ್ ವಾಹನ ಒಮ್ನಿ ಕಾರಿಗೆ ಡಿಕ್ಕಿಯಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಕಾರು ಚಾಲಕನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಗೆ ಸ್ಪಂದಿಸಿ ದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
‌
ರಾಜೇಶ್ ಶೆಟ್ಟಿ ಅವರ ಮನೆಯ ಸಾಕುಬೆಕ್ಕಿಗೆ ಉಷಾರಿಲ್ಲದ ಕಾರಣ ಬೆಕ್ಕನ್ನು ವೈದ್ಯರ ಬಳಿ ಪರೀಕ್ಷೆ ನಡೆಸಿ , ಔಷಧಿಯ ಜೊತೆಯಲ್ಲಿ ಮನೆಗೆ ಹೋಗುತ್ತಿದ್ದ ವೇಳೆ ತಲಪಾಡಿ ಎಂಬಲ್ಲಿ ಅಪಘಾತ ಸಂಭವಿಸಿದ್ದು, ಬೆಕ್ಕು ಸ್ಥಳದಲ್ಲಿಯೇ ಮೃತಪಟ್ಟಿತ್ತು.

ತಲಪಾಡಿ ಬಸ್ ಡಿಪೋ ಬದಿಯ ರಸ್ತೆಯಲ್ಲಿ ಮರಗಳನ್ನು ತುಂಬಿ ಬರುತ್ತಿದ್ದ ಪಿಕಪ್ ವಾಹನ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶ ಮಾಡಿ ಬಿಸಿರೋಡು ಕಡೆಗೆ ಕ್ರಾಸ್ ಮಾಡುವ ವಿರುದ್ದ ದಿಕ್ಕಿನಲ್ಲಿ ಸಂಚರಿಸಿ ಬಿಸಿರೋಡು ಕಡೆಯಿಂದ ಮಂಗಳೂರು ‌ಕಡೆಗೆ ತಲಪಾಡಿಗೆ ಬರುತ್ತಿದ್ದ ಒಮ್ನಿ ಕಾರಿಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬ್ರಹ್ಮರ ಕೋಟ್ಲು ನಿವಾಸಿ ರಾಜೇಶ್ ಶೆಟ್ಟಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!