February 4, 2026

ಮದುವೆಯಾಗದೇ ವಂಚಿಸಿದ  ಪ್ರಿಯಕರನ  ಮೇಲೆ ಕುದಿಯುವ ಎಣ್ಣೆ ಸುರಿದ ಯುವತಿ

0
image_editor_output_image-279817549-1678687966721.jpg

ಚೆನ್ನೈ: ವಂಚಿಸಿದ ಪ್ರಿಯಕರನ ಮೇಲೆ ಯುವತಿಯೊಬ್ಬಳು ಕುದಿಯುವ ಎಣ್ಣೆ ಸುರಿದ ಘಟನೆ ತಮಿಳುನಾಡಿನ ಈರೋಡ್‍ನಲ್ಲಿ ನಡೆದಿದೆ.

ಕಾರ್ತಿ (27) ತಮಿಳುನಾಡಿನ ಭವಾನಿಯ ವರ್ಣಪುರಂ ನಿವಾಸಿಯಾಗಿದ್ದು, ಪೆರುಂದುರೈನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ.

ಈತ ತನ್ನ ಸಂಬಂಧಿ ಮೀನಾ ದೇವಿಯೊಂದಿಗೆ ಸಂಬಂಧ ಹೊಂದಿದ್ದ. ಜೊತೆಗೆ ಮದುವೆಯಾಗುವುದಾಗಿಯೂ ಭರವಸೆ ನೀಡಿದ್ದ.

ಆದರೆ ಕಾರ್ತಿ ಬೇರೊಬ್ಬ ಮಹಿಳೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯವನ್ನು ಮೀನಾದೇವಿ ತಿಳಿದಿದ್ದಾಳೆ.

ಅದಾದ ಬಳಿಕ ಈ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಅದಾದ ಬಳಿಕ ಮೀನಾದೇವಿಯನ್ನು ಕಾರ್ತಿ ಭೇಟಿಯಾಗಲು ಹೋದಾಗ ಮತ್ತೆ ಜಗಳ ನಡೆದಿದೆ.

ಇದರಿಂದ ಕೋಪಗೊಂಡ ಮೀನಾ ದೇವಿ ಆತನ ಮೇಲೆ ಕುದಿಯುವ ಎಣ್ಣೆಯನ್ನು ಸುರಿದಿದ್ದಾಳೆ.

Leave a Reply

Your email address will not be published. Required fields are marked *

You may have missed

error: Content is protected !!