March 20, 2026

ನ್ಯೂಝಿಲೆಂಡ್ vs ಭಾರತ T-20 ಟೂರ್ನಿ:
ನ್ಯೂಝಿಲೆಂಡ್ ವಿರುದ್ಧ ಭಾರತಕ್ಕೆ 7 ವಿಕೆಟ್ ಗಳ ಜಯ

0
Screenshot_20211119-205726_Instagram.jpg

ರಾಂಚಿ: ಇಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ಮತ್ತು ಭಾರತ ತಂಡದ 20-20 ಕ್ರಿಕೆಟ್ ಟೂರ್ನಿಯಲ್ಲಿ ಎರಡನೇ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಭಾರತಕ್ಕೆ 7 ವಿಕೆಟ್ ಗಳ ಜಯ ಸಾದಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಝಿಲೆಂಡ್ ತಂಡವು ‌ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 153 ಗಳಿಸಿತು.

ನ್ಯೂಝಿಲೆಂಡ್ ತಂಡದ ಮಾರ್ಟಿನ್ ಗುಪ್ಟಿಲ್ 31(15), ಡಾರ್ಲಿ ಮಿಷೆಲ್ 31(28), ಚಾಪ್ಮಾನ್ 21(17), ಗ್ಲೆನ್ ಫಿಲಿಪ್ಸ್ 34(21), ಸೀಫರ್ಟ್ 13(15), ಜೇಮ್ಸ್ ನೀಶಮ್ 3(12), ಸಾಂಟ್ನರ್ 8*(9), ಆಡಂ ಮಿಲ್ನೆ 5*(4) ರನ್ ಗಳಿಸಿದರು.

ನ್ಯೂಝಿಲೆಂಡ್ ನೀಡಿದ ಗುರಿಯನ್ನು ಭಾರತ ತಂಡವು 17.2 ಓವರುಗಳಲ್ಲಿ 3 ವಿಕೆಟ್ ನಷ್ಟಕ್ಕೆ 155 ರನ್ ಗಳಿಸುವುದರ ಮೂಲಕ 7 ವಿಕೆಟ್ ಗಳ ಜಯವನ್ನು ಸಾಧಿಸಿತು. ನಾಯಕ ರೋಹಿತ್ ಶರ್ಮಾ ಮತ್ತು ಕೆ ಎಲ್ ರಾಹುಲ್ ರ ಆಕರ್ಷಕ ಅರ್ಧಶತಕದ ಬ್ಯಾಟಿಂಗ್ ಪ್ರದರ್ಶನ ತಂಡಕ್ಕೆ ಉತ್ತಮ ರನ್ ಪೇರಿಸಿದರು.

ಆರಂಭಿಕ ಆಟಗಾರ ಕೆ. ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಮೊದಲ ವಿಕೆಟ್ ಗೆ 117 ರನ್ ಗಳ ಜೊತೆಯಾಟದಲ್ಲಿ ಉತ್ತಮ ಇನ್ನಿಂಗ್ಸ್ ಆರಂಬಿಸಿ ಗೆಲುವಿನ ಹಾದಿ ಸುಗಮಗೊಳಿಸಿದರು.

ಭಾರತ ತಂಡದ ಕೆ ಎಲ್ ರಾಹುಲ್ 65(49), ರೋಹಿತ್ ಶರ್ಮಾ 55(36), ಸೂರ್ಯಕುಮಾರ್ ಯಾದವ್ 1(2), ರಿಷಭ್ ಪಂತ್ 12*(06), ವೆಂಕಟೇಶ್ ಅಯ್ಯರ್ 12(11), ರನ್ ಗಳಿಸಿದರು.

ಭಾರತ ಪರ ಉತ್ತಮ ಬೌಲಿಂಗ್ ಪ್ರದರ್ಶನ ನಡೆಸಿದ ಹರ್ಷಲ್ ಪಟೇಲ್ 2, ಭುವನೇಶ್ವರ್ ಕುಮಾರ್ , ರವಿಚಂದ್ರನ್ ಅಶ್ವಿನ್ , ದೀಪಕ್ ಚಾಹರ್ ಮತ್ತು ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದರು.

Leave a Reply

Your email address will not be published. Required fields are marked *

error: Content is protected !!