May 14, 2026

BJPಗೆ ಓಟ್ ಹಾಕದ ಮುಸ್ಲಿಮರ ಕೆಲಸ ಯಾಕೆ ಮಾಡಬೇಕು ಎನ್ನುವ ಅಹಂಕಾರ ಬಿಜೆಪಿಗೆ ಇದೆ: BJP ಶಾಸಕ ಉಮಾನಾಥ ಕೋಟ್ಯಾನ್

0
image_editor_output_image-1623139312-1678519397044.jpg

ಕಿನ್ನಿಗೋಳಿ: ಮತ ನೀಡದ ಮುಸ್ಲಿಮರ ಕೆಲಸ ಯಾಕೆ ಮಾಡಬೇಕು ಅನ್ನೋ ಅಹಂಕಾರ ಬಿಜೆಪಿಗೆ ಇದೆ ಎಂದು ಸ್ವ ಪಕ್ಷದ ವಿರುದ್ಧವೇ ಶಾಸಕ ಉಮಾನಾಥ ಕೋಟ್ಯಾನ್ ವಾಗ್ದಾಳಿ ನಡೆಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಿನ್ನಿಗೋಳಿಯ ಮುಸ್ಲಿಮ್ ಸಮುದಾಯದವರ ಜೊತೆಗಿನ ಸಭೆ ವೇಳೆ ಮಾತನಾಡಿದ ಶಾಸಕರು, ಅಲ್ಪಸಂಖ್ಯಾತ ಕ್ರೈಸ್ತ ಹಾಗೂ ಮುಸ್ಲಿಂ ಸಮುದಾಯದ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಒಂದು ರೀತಿ ಅಹಂಕಾರ ಮನೋಭಾವ ಹೊಂದಿದೆ ಎಂದರು.

ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರನ್ನು ಕೂಲಿಯಾಳುಗಳಂತೆ ನೋಡುತ್ತಿದೆ. ಬಿಜೆಪಿ ಪಕ್ಷದವರಿಗೆ ನಮಗೆ ವೋಟ್ ನೀಡದ ಮುಸಲ್ಮಾನರ ಕೆಲಸ ಯಾಕೆ ಮಾಡಬೇಕು ಅನ್ನೋ ಅಹಂಕಾರ ಇದೆ ಎಂದರು.

Leave a Reply

Your email address will not be published. Required fields are marked *

error: Content is protected !!