May 14, 2026

ಹೋಳಿ ಹಬ್ಬ ಆಚರಣೆ ಹೆಸರಿನಲ್ಲಿ ಜಪಾನಿನ ಮಹಿಳೆಗೆ ಬಲವಂತಾಗಿ ಬಣ್ಣ ಹಚ್ಚಿ ಕಿರುಕುಳ: ಮೂವರ ಬಂಧನ

0
image_editor_output_image-1702206114-1678516491062.jpg

ದೆಹಲಿ: ಹೋಳಿ ಹಬ್ಬ ಆಚರಣೆ ವೇಳೆ ಜಪಾನಿನ ಮಹಿಳೆಗೆ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿದಂತೆ ಓರ್ವ ಅಪ್ರಾಪ್ತ ಸೇರಿದಂತೆ ಮೂವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ಪಹರ್‌ಗಂಜ್ ಪ್ರದೇಶದಲ್ಲಿ ಜಪಾನಿನ ಮಹಿಳೆಗೆ ಹೋಳಿ ಸಮಯದಲ್ಲಿ ಬಣ್ಣ ಹಚ್ಚುವ ನೆಪದಲ್ಲಿ ಹುಡುಗರ ಗುಂಪೊಂದು ಕಿರುಕುಳ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಹುಡುಗರಿಗಾಗಿ ಹುಡುಕಾಟ ನಡೆಸಲಾಗಿದ್ದು, ಅಧಿಕಾರಿಗಳ ಹುಡುಕಾಟದ ಬಳಿಕ ವೀಡಿಯೊದಲ್ಲಿ ಕಂಡುಬಂದಿದ್ದ ಹುಡುಗರನ್ನು ಗುರುತಿಸಲಾಗಿದೆ.

ಇನ್ನು ಓರ್ವ ಅಪ್ರಾಪ್ತ ಸೇರಿದಂತೆ ಮೂವರು ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ನಡೆದ ಘಟನೆ ಅವರು ತಪ್ಪೊಪ್ಪಿಕೊಂಡಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!