May 14, 2026

ವಸತಿ ಮನೆ ಬಿಡುಗಡೆಗೆ ಲಂಚ ನೀಡದ ವ್ಯಕ್ತಿಯ ಮರ್ಮಾಂಗಕ್ಕೆ ಒದ್ದು ಹತ್ಯೆ

0
image_editor_output_image1121527723-1678512307522.jpg

ಕಲಬುರಗಿ: ವಸತಿ ಯೋಜನೆಯಲ್ಲಿ ಮಂಜೂರಾಗಿದ್ದ ಮನೆಯ ಲಂಚದ ವಿಚಾರದಲ್ಲಿ ವ್ಯಕ್ತಿಯೊಬ್ಬ ಕೊಲೆಯಾದ ಪ್ರಕರಣ ಜೇವರ್ಗಿ ತಾಲೂಕಿನ ಆಂದೋಲ ಗ್ರಾಮದಲ್ಲಿ ನಡೆದಿದೆ.

ಬಸವರಾಜ್ (35) ಎಂಬಾತನಿಗೆ ವಸತಿ ಯೋಜನೆ ಅಡಿ ಮನೆ ಮಂಜೂರಾಗಿತ್ತು. ಮನೆಗೆ ಹಣ ಬಿಡುಗಡೆ ಮಾಡಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಹಾಗೂ ಆಕೆಯ ಪತಿ 25 ಸಾವಿರ ರೂ. ಲಂಚ ನೀಡುವಂತೆ ಕೇಳಿದ್ದರು.

ಇದರಿಂದ ಬೇಸರಗೊಂಡಿದ್ದ ಬಸವರಾಜ್ ಲಂಚದ ವಿಚಾರವನ್ನು ಊರಿನವರ ಮುಂದೆ ಹೇಳಿಕೊಂಡಿದ್ದ.

ಇದರಿಂದ ಕೋಪಗೊಂಡ ಗ್ರಾಮ ಪಂಚಾಯತಿ ಉಪಾಧ್ಯಕ್ಷೆಯ ಪತಿ ಸಿದ್ದಪ್ಪ ಹಾಗೂ ಮಗ ಗುರುರಾಜ್, ಬಸವರಾಜ್‍ನ ಎದೆ ಹಾಗೂ ಮರ್ಮಾಂಕ್ಕೆ ಒದ್ದು ಕೊಲೆ ಮಾಡಿದ್ದಾರೆ.

ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!