May 14, 2026

ಮಂಗಳೂರು: ರೈಲಿನಲ್ಲಿ ಸಾಗಿಸುತ್ತಿದ್ದ ಟ್ಯಾಂಕರ್ ನಲ್ಲಿ ಗ್ಯಾಸ್ ಸೋರಿಕೆ: ಸ್ಥಳೀಯರಲ್ಲಿ ಆತಂಕ

0
n47907204216785058594786147e7c2f9ca02a22b916c8dbf262c1dfc0f920ac70b4ef3d75c2b7e5c227b88.jpg

ಮಂಗಳೂರು: ರೈಲಿನಲ್ಲಿ ಸಾಗಿಸುತ್ತಿದ್ದ ಟ್ಯಾಂಕರ್ ನಲ್ಲಿ ಗ್ಯಾಸ್ ಸೋರಿಕೆಯಾಗಿ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನಿಂದ ಸರಕು ಸಾಗಣೆ ರೈಲಿನಲ್ಲಿ ಗ್ಯಾಸ್ ತುಂಬಿದ ಟ್ಯಾಂಕರ್ಗಳನ್ನು ಸಾಗಿಸಲಾಗುತ್ತಿತ್ತು. ಗ್ಯಾಸ್ ಸೋರಿಕೆ ಶಂಕೆ ಹಿನ್ನಲೆ ಮಂಗಳೂರಿನಿಂದ 7 ಕಿ.ಮೀ ದೂರ ತೆರಳಿದ ರೈಲು ವಾಪಸ್ HPCL ಗೆ ಆಗಮಿಸಿದೆ. ಕೆಲವು ಟ್ಯಾಂಕರ್ಗಳಲ್ಲಿ ದಾರಿ ಮಧ್ಯೆ ಗ್ಯಾಸ್ ಸೋರಿಕೆಯಾಗಿದ್ದು, ಕೂಡಲೇ ರೈಲು ವಾಪಸ್ HPCL ಗೆ ಆಗಮಿಸಿದೆ.

ಜೋಕಟ್ಟೆ ಗ್ರಾಮದ ಬಳಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ರೈಲ್ವೇ ಗೇಟ್ ಬಳಿ ಅಗ್ನಿಶಾಮಕದಳ ನಿಯೋಜನೆ ಮಾಡಲಾಗಿದೆ. ಗ್ಯಾಸ್ ಸೋರಿಕೆ ಸುದ್ದಿಯಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ರೈಲ್ವೆ ಹಳಿ ಸುತ್ತಮುತ್ತ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

Leave a Reply

Your email address will not be published. Required fields are marked *

error: Content is protected !!