February 3, 2026

ಮಂಗಳೂರು: ರೈಲು ಢಿಕ್ಕಿಯಾಗಿ ಸಿವಿಲ್‌ ಗುತ್ತಿಗೆದಾರ ಸಾವು

0
image_editor_output_image394979949-1678427619867.jpg

ಮಂಗಳೂರು: ರೈಲು ಢಿಕ್ಕಿಯಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಮಂಗಳೂರು ಸಮೀಪದಲ್ಲಿ ಗುರುವಾರ ನಡೆದಿದೆ.

ಉಳ್ಳಾಲಬೈಲು ಗೇರು ಕೃಷಿ ಸಂಶೋಧನಾ ಕೇಂದ್ರ ಬಳಿಯ ನಿವಾಸಿ, ಹಿರಿಯ ಸಿವಿಲ್‌ ಗುತ್ತಿಗೆದಾರ ಜನಾರ್ದನ ಆಚಾರಿ (78) ಮೃತ ದುರ್ದೈವಿ.

ಜನಾರ್ದನ ಅವರು ಗುರುವಾರ ಬೆಳಗ್ಗೆ ಮನೆಯಿಂದ ಹೊರಟು ಹೊರ ಹೋಗಿದ್ದರು. ಈ ವೇಳೆ ಮನೆ ಸಮೀಪದ ಕಾಪಿಕಾಡಿನ ರೈಲ್ವೇ ಹಳಿಯಲ್ಲಿ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಸಿವಿಲ್ ಗುತ್ತಿಗೆದಾರರಾಗಿದ್ದ ಜನಾರ್ದನ ಅವರು ಹಲವು ಮಂದಿ ಕಾರ್ಮಿಕರಿಗೆ ಕೆಲಸ ನೀಡಿದ್ದರು. ಕಳೆದ ಕೆಲವು ವರ್ಷಗಳಿಂದ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!