ನಿಂತಿದ್ದ ಬಸ್ಸಿನಲ್ಲಿ ದಿಢೀರ್ ಬೆಂಕಿ: ಬಸ್ ನ ಸೀಟಿನಲ್ಲಿ ಮಲಗಿದ್ದ ಕಂಡಕ್ಟರ್ ಸಜೀವ ದಹನ
ಬೆಂಗಳೂರು: ನಿಂತಿದ್ದ ಬಿಎಂಟಿಸಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡು ನಿರ್ವಾಹಕ ಸಜೀವ ದಹನವಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಮುತ್ತಯ್ಯ ಸ್ವಾಮಿ (45) ಎಂದು ಗುರುತಿಸಲಾಗಿದೆ.
ಬಸ್ ಡಿಪೋ 31ಕ್ಕೆ ಸೇರಿದ್ದಾಗಿದೆ. ಮುಂಜಾನೆ 4 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ.
ರಾತ್ರಿ ರೂಟ್ ಮುಗಿಸಿ ಲಿಂಗಧೀರನಹಳ್ಳಿ ನಿಲ್ದಾಣ ದಲ್ಲಿ ಚಾಲಕ ಹಾಗೂ ನಿರ್ವಾಹಕ ಬಸ್‍ನಲ್ಲಿ ಮಲಗಿದ್ದರು.
ಮುತ್ತಯ್ಯ ಸ್ವಾಮಿ ಅವರು ಬಸ್ಸಿನ ಸಿಟ್‍ನಲ್ಲಿಯೇ ಮಲಗಿದ್ದರು. ಈ ವೇಳೆ ಬಸ್ಸಿಗೆ ದಿಢೀರ್ ಬೆಂಕಿ ಹೊತ್ತಿಕೊಂಡಿದ್ದು, ಮುತ್ತಯ್ಯ ಅವರು ಮಲಗಿದ್ದಲ್ಲೇ ಸಂಪೂರ್ಣ ಸುಟ್ಟು ಕರಕಲಾಗಿದ್ದಾರೆ. ಇತ್ತ ಮುಂಜಾನೆ ಚಾಲಕ ಎದ್ದು ಶೌಚಕ್ಕೆ ಹೋದ ವೇಳೆ ಘಟನೆ ಬೆಳಕಿಗೆ ಬಂದಿದೆ




