February 3, 2026

ವಿಷ ಪೂರಿತ ಕೀಟ ಕಚ್ಚಿ ಬಾಲಕಿಗೆ ದಾರುಣ ಸಾವು

0
image_editor_output_image1316889029-1678259289562.jpg

ಕೇರಳ: ಪುಟ್ಟ ಬಾಲಕಿಗೆ ವಿಷ ಪೂರಿತ ಕೀಟ ಕಚ್ಚಿ ಮೃತ ಪಟ್ಟಿರುವ ದಾರುಣ ಘಟನೆ ಕೇರಳದ ಪತ್ತನಂತಿಟ್ಟದ ತಿರುವಲ್ಲಾದಲ್ಲಿ ನಡೆದಿದೆ.

ಮೂಲತಃ ಪೆರಿಂಗಾರ ಕೊಚಾರಿಮುಕ್ಕಂನ ಪನಾರ ಮನೆ ನಿವಾಸಿಗಳಾದ ಅನೀಶ್ ಮತ್ತು ಶಾಂತಿ ಕೃಷ್ಣನ್ ದಂಪತಿಯ ಪುತ್ರಿ ಅಂಜಿತಾ ಅನೀಶ್ ಮೃತಪಟ್ಟ ಬಾಲಕಿ.

ಈಕೆ ತಿರುವಲ್ಲಾದ ಎಂಜಿಎಂ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ.

ಅಂಜಿತಾ ಅನೀಶ್ ಸ್ನೇಹಿತೆಯರೊಂದಿಗೆ ಮನೆಯ ಹತ್ತಿರ ಹೊಲದಲ್ಲಿ ಆಟವಾಡುವ ಸದಂರ್ಭದಲ್ಲಿ ಕಿವಿಯೊಳಗೆ ವಿಷಪೂರಿತ ಕೀಟ ಕಚ್ಚಿದೆ.

ಕೀಟ ಕಚ್ಚಿದ ಅನುಭವಗೊಂಡು ಮನೆಯಲ್ಲಿ ತಿಳಿಸಿದ್ದಾಳೆ ಮತ್ತು ಕಚ್ಚಿದ 30 ನಿಮಿಷದಲ್ಲಿ ಬಾಲಕಿಯ ಇಡೀ ದೇಹದಲ್ಲಿ ತುರಿಕೆ ಆರಂಭವಾಗಿದೆ.

ತಕ್ಷಣ ಬಾಲಕಿಯನ್ನು ತಿರುವಲ್ಲಾ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ಹೋಗುವ ಸಂದರ್ಭದಲ್ಲಿ ಬಾಲಕಿ ಕುಸಿದು ಬಿದ್ದಿದ್ದಾಳೆ.

ನಂತರ ಅವಳನ್ನು ತಿರುವಲ್ಲಾ ವೈದ್ಯಕೀಯ ಕಾಲೇಜು ಆಸ್ಪತ್ರೆಲ್ಲಿ ಚಿಕಿತ್ಸೆ ನೀಡಿದರು ಪ್ರಬಲ ವಿಷಕಾರಿ ಕೀಟ ಕಚ್ಚಿ ಶ್ವಾಸಕೋಶಕ್ಕೆ ಸೋಂಕು ಹರಡಿದ ಹಿನ್ನಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!