March 11, 2026

ವಿಟ್ಲ: ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಶಾಲೆಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ

0
Screenshot_20230307-113832_Gallery.jpg

ವಿಟ್ಲ: ಕಂಬಳಬೆಟ್ಟುವಿನ ಜನಪ್ರಿಯ ಸೆಂಟ್ರಲ್ ಶಾಲೆಯಲ್ಲಿ ಮಾರ್ಚ್ 4 ರಂದು ವಿದ್ಯಾರ್ಥಿಗಳಿಗೆ, ಪೋಷಕರಿಗೆ ಹಾಗೂ ಸಿಬ್ಬಂದಿಗಳಿಗೆ ಜನಪ್ರಿಯ ಆಡಳಿತ ಸಮಿತಿಯ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ದೇರಳಕಟ್ಟೆಯ ಸ್ಟಾರ್ ಅಪ್ಟಿಕಲ್ಸ್ ಮತ್ತು ಐ ಕ್ಲಿನಿಕ್ ಸಹಯೋಗದೊಂದಿಗೆ ಜನಪ್ರಿಯ ಶಾಲೆಯ ಬೀಫಾತಿಮ ಹಜ್ಜುಮ್ಮ ಬ್ಲಾಕ್ ನಲ್ಲಿ ನಡೆದ ಕಣ್ಣಿನ ತಪಾಸಣಾ ಶಿಬಿರದಲ್ಲಿ ನೂರಕ್ಕೂ ಹೆಚ್ಚಿನ ಪೋಷಕರು ಮತ್ತು ಮಕ್ಕಳು ಹಾಗೆಯೇ ಸಿಬ್ಬಂದಿಗಳು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದರು.

ಜನಪ್ರಿಯ ಶಾಲೆಯ 6ನೇ ತರಗತಿಯ ಯುನೈಟೆಡ್ ನೇಷನ್ಸ್ ಸ್ವಯಂಸೇವಕರು ಶಿಬಿರದ ಉಸ್ತುವಾರಿ ವಹಿಸಿ ಸುಸೂತ್ರವಾಗಿ ನಡೆಸಿ ಕೊಟ್ಟರು. ಕೊನೆಯಲ್ಲಿ ಸ್ಟಾರ್ ಒಪ್ಟಿಕಲ್ಸ್ ನ ರೋಷನ್ ಮತ್ತು ಬಳಗದವರಿಗೆ ಜನಪ್ರಿಯ ಶಾಲೆ ಮತ್ತು ಆಡಳಿತ ಸಮಿತಿಯ ಪರವಾಗಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂಧರ್ಭ ಶಾಲೆಯ ಮುಖ್ಯ ಶಿಕ್ಷಕಿ ಪ್ರಿಯಾ ದುರೈರಾಜ್, ಆಡಳಿತ ಅಧಿಕಾರಿ ಸಫ್ವಾನ್ ಪಿಲಿಕಲ್ ಹಾಗೂ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!