May 14, 2026

ದೇವಸ್ಥಾನ ಪ್ರವೇಶದ ಮಾಡಿದ ಕಾರಣಕ್ಕೆ ದಲಿತರಿಗೆ ಮೇಲೆ ಸವರ್ಣಿಯರಿಂದ ಹಲ್ಲೆ

0
image_editor_output_image2014564609-1678078633163.jpg

ಹಾವೇರಿ: ದೇವಸ್ಥಾನ ಪ್ರವೇಶದ ಮಾಡಿದರೆಂಬ ಕಾರಣಕ್ಕೆ ದಲಿತ ಸಮುದಾಯದ ತಾಯಿ-ಮಗನ ಮೇಲೆ ಸವರ್ಣಿಯರು ಹಲ್ಲೆ ಮಾಡಿದ ಘಟನೆ ರಾಣೆಬೆನ್ನೂರು ತಾಲೂಕಿನ ನಂದಿಹಳ್ಳಿಯಲ್ಲಿ ನಡೆದಿದೆ.

ಇದು ಇಷ್ಟಕ್ಕೆ ನಿಲ್ಲದೇ, ದಲಿತರ ಮನೆಗಳ ಮೇಲೆ ಕಲ್ಲು ತೂರಿ, ಬೈಕ್ ಜಖಂ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮನೆಗಳಿಗೆ ಬೆಂಕಿ ಹಚ್ಚಲು ಮೇಲ್ವರ್ಗದ ಮಂದಿ ಪ್ರಯತ್ನಿಸಿದ್ದಾರೆ.

ಬಸವೇಶ್ವರ ಜಾತ್ರೆ ಯಲ್ಲಿ ದೇವರ ಮೆರವಣಿಗೆಯನ್ನ ಗ್ರಾಮದ ಪ್ರಮುಖ ಬೀದಿಯಲ್ಲಿ ಮಾಡಲಾಯಿತು.

ಮೆರವಣಿಗೆಯಲ್ಲಿ ದಲಿತರು ಭಾಗವಹಿಸಿ ಮೇಲ್ದರ್ಜೆಯ ಜನರ ಜೊತೆಗೆ ಕುಣಿಯಲು ಹೋದಾಗ, ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಎರಡು ಸಮುದಾಯದವರು ದೊಣ್ಣೆ, ಕಲ್ಲು, ಬಡಿಗೆ ಹಿಡಿದುಕೊಂಡು ಬಡಿದಾಡಿಕೊಂಡಿದ್ದಾರೆ.

ಗ್ರಾಮದ ಅಂಬೇಡ್ಕರ್ ಬ್ಯಾನರ್ ಹರಿದು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಪ್ರಕರಣ ಸಂಬಂಧ 30ಕ್ಕೂ ಅಧಿಕ ಮಂದಿ ವಿರುದ್ಧ ಕುಮಾರಪಟ್ಟಣಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!