June 28, 2026

ನಾಗಾಲ್ಯಾಂಡ್‌ನಲ್ಲಿ ಎನ್‌ಡಿಪಿಪಿ- ಬಿಜೆಪಿ ಮೈತ್ರಿಗೆ ಅಧಿಕಾರ

0
IMG-20230302-WA0035.jpg

ನಾಗಾಲ್ಯಾಂಡ್‌: ನಾಗಾಲ್ಯಾಂಡ್‌ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ನ್ಯಾಷನಲಿಸ್ಟ್‌ ಡೆಮಾಕ್ರಟಿಕ್‌ ಪ್ರೊಗ್ರೆಸ್ಸಿವ್‌ ಪಾರ್ಟಿ (ಎನ್‌ಡಿಪಿಪಿ) ಮೈತ್ರಿಕೂಟ 37 ಸ್ಥಾನಗಳನ್ನು ಜಯಿಸಿ, ಸ್ಪಷ್ಟ ಬಹುಮತ ಸಾಧಿಸಿದ್ದು, ಸತತ ಎರಡನೇ ಅವಧಿಗೆ ಸರ್ಕಾರ ರಚಿಸಲಿವೆ.

60 ಸದಸ್ಯ ಬಲದ ನಾಗಾಲ್ಯಾಂಡ್‌ ವಿಧಾನಸಭೆಯ 59 ಕ್ಷೇತ್ರಗಳಿಗೆ ಫೆಬ್ರವರಿ 27 ರಂದು ಮತದಾನ ನಡೆದಿತ್ತು. ಈ ಪೈಕಿ ಎನ್‌ಡಿಪಿಪಿ 40 ಕ್ಷೇತ್ರಗಳಲ್ಲಿ ಹಾಗೂ ಬಿಜೆಪಿ 20 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು.

ಇನ್ನು ಒಂದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 59 ಕ್ಷೇತ್ರಗಳ ಫಲಿತಾಂಶ ಸದ್ಯ ಪ್ರಕಟವಾಗಿದೆ. ಇದರಲ್ಲಿ ಎನ್‌ಡಿಪಿಪಿ 25 ಸ್ಥಾನಗಳನ್ನು ಜಯಿಸಿದ್ದರೆ, ಬಿಜೆಪಿ 12 ಕಡೆ ಜಯ ಸಾಧಿಸಿದೆ.

ಸದ್ಯ ನಾಗಾಲ್ಯಾಂಡ್‌ ಮುಖ್ಯಮಂತ್ರಿಯಾಗಿರುವ ನೆಫಿಯು ರಿಯೊ ಅವರು ನಾಗಾ ಪೀಪಲ್‌ ಫ್ರಂಟ್‌ (ಎನ್‌ಪಿಎಫ್‌) ಪಕ್ಷದಿಂದ ಹೊರಬಂದು 2017ರಲ್ಲಿ ಎನ್‌ಡಿಪಿಪಿ ಸ್ಥಾಪಿಸಿಸಿದ್ದರು.

Leave a Reply

Your email address will not be published. Required fields are marked *

error: Content is protected !!