March 31, 2026

ತಾಯಿ ಮೃತಪಟ್ಟಿದ್ದಾಳೆಂದು ಗೊತ್ತಾಗದೇ ಮೃತದೇಹದೊಂದಿಗೆ 2 ದಿನ ಕಳೆದ ಬಾಲಕ

0
image_editor_output_image1572260976-1677737745942.jpg

ಬೆಂಗಳೂರು: ತಾಯಿ ಮೃತಪಟ್ಟಿದ್ದಾಳೆ ಎಂಬುದನ್ನು ಅರಿಯದ 11 ವರ್ಷದ ಬಾಲಕ ಮೃತದೇಹದೊಂದಿಗೆ ಎರಡು ದಿನ ಕಳೆದಿರುವ ಘಟನೆ ನಗರದಲ್ಲಿ ನಡೆದಿದೆ.

ಅಣ್ಣಮ್ಮ(40) ಎಂಬವರು ಮಲಗಿರುವಾಗಲೇ ಸಾವನ್ನಪ್ಪಿದ್ದರು.

ಇದನ್ನರಿಯದ ಮಗ ತನ್ನ ತಾಯಿ ಮಲಗಿದ್ದಾರೆ ಎಂದೇ ಭಾವಿಸಿ ಮನೆಯಂಗಳದಲ್ಲಿ ಆಟವಾಡಿಕೊಂಡು ಎರಡು ದಿನ ಕಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ‌.

ಮನಕಲಕುವ ಸ್ಟೋರಿ: ಗಂಗಾ ನಗರದಲ್ಲಿ ವಾಸವಿದ್ದ ಅಣ್ಣಮ್ಮ ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದರು.

ಫೆ.25 ರಂದು ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ. ತಾಯಿ ಸಾವನ್ನಪ್ಪಿರುವ ಬಗ್ಗೆ ಬಾಲಕನಿಗೆ ಕಿಂಚಿತ್ತೂ ಗೊತ್ತಾಗಲಿಲ್ಲ. ಹೀಗಾಗಿ, ಎರಡು ದಿನ ಮೃತದೇಹದ ಜತೆಗೇ ಸಮಯ ಕಳೆದಿದ್ದಾನೆ.

ಅಕ್ಕಪಕ್ಕದ ಮನೆಯವರ ಬಳಿ ಹೋಗಿ ಅಮ್ಮ ಅಡುಗೆ ಮಾಡಿಲ್ಲ ಅಂತಾ ಊಟ ಮಾಡಿಕೊಂಡು ಬಂದು ಮತ್ತೆ ಅಮ್ಮನ ಮೃತದೇಹದ ಪಕ್ಕದಲ್ಲೇ ಮಲಗಿಕೊಳ್ಳುತ್ತಿದ್ದನಂತೆ.ಫೆ.28 ರಂದು ಮೃತದೇಹದಿಂದ ದುರ್ವಾಸನೆ ಹೊರಬರಲು ಶುರುವಾಗಿದೆ.

ಈ ಬಗ್ಗೆ ಬಾಲಕ ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದಾನೆ.‌ ಪರಿಶೀಲಿಸಿದಾಗ ಮಹಿಳೆ ಸಾವನ್ನಪ್ಪಿರುವುದು ಗೊತ್ತಾಗಿದೆ.

ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕಾಗಮಿಸಿದ ಆರ್.ಟಿ.ನಗರ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಬಳಿಕ ಸಂಬಂಧಿಕರಿಗೆ‌ ಹಸ್ತಾಂತರಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!