ಪುಂಜಾಲಕಟ್ಟೆ: ಸಾರ್ವಜನಿಕ ಬಸ್ಸು ನಿಲ್ದಾಣ ಲೋಕಾರ್ಪಣೆ: ಬಿಜೆಪಿಯ ಸಕ್ರಿಯ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆ
ಪುಂಜಾಲಕಟ್ಟೆ: ಬಂಟ್ವಾಳ- ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವ ಸಮಯದಲ್ಲಿ ಶ್ರೀರಾಮನಗರದ ಆಸ್ಪತ್ರೆಯ ಮುಂಭಾಗದಲ್ಲಿ ಇದ್ದಂತಹ ಸಾರ್ವಜನಿಕ ಬಸ್ಸು ತಗುದಾಣವನ್ನು ತೆರವುಗೊಳಿಸಿದ್ದರು. ಸುಮಾರು 5-6 ವರ್ಷಗಳು ಸಾರ್ವಜನಿಕರಿಗೆ, ಆಸ್ಪತ್ರೆಗೆ ಬಂದಂತಹ ರೋಗಿಗಳಿಗೆ ಆದ ಸಮಸ್ಯೆ ಯನ್ನು ಮನಗಂಡ ವಲಯ ಕಾಂಗ್ರೆಸ್ ಎಲ್ಲಾ ಕಾಂಗ್ರೆಸ್ ಸದಸ್ಯರ ಸಹಾಯದಿಂದ ಸಾರ್ವಜನಿಕರಿಗೆ ಉಪಯೋಗಕ್ಕಾಗಿ ಬಸ್ಸು ನಿಲ್ದಾಣವನ್ನು ನಿರ್ಮಿಸಿದರು. ಇದನ್ನು ಇಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಉದ್ಘಾಟನೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ 5000 ಕೋಟಿಗಿಂತಲೂ ಅಧಿಕ ಅನುದಾನ ಬಂಟ್ವಾಳ ಕ್ಷೇತ್ರಕ್ಕೆ ತಂದಿರುವುದಾಗಿ ಹಾಗೂ ಬಂಟ್ವಾಳದ ಸರ್ವಾಂಗಿನ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ದುಡಿದಿದ್ದೇನೆ ಎಂದರು.
ಸಾರ್ವಜನಿಕ ಬಸ್ಸು ತಂಗುದಾಣ ಉದ್ಘಾಟನೆ ಸಮಾರಂಭದ ಈ ಸಂದರ್ಭದಲ್ಲಿ ಮಾಜಿ ಸಚಿವ, ಬಂಟ್ವಾಳದ ಜನಪ್ರಿಯ ನಾಯಕ, ಅಭಿವೃದ್ಧಿ ಹರಿಕಾರ ಸಚಿವ ಮಾಜಿ ಬಿ.ರಮಾನಾಥ ರೈ ಅವರ ನೇತೃತ್ವದಲ್ಲಿ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾದ ಲಕ್ಷ್ಮಣ ಪೂಜಾರಿ ನಾಕುನಾಡು, ಸುಧಾಕರ ಪೂಜಾರಿ ನಾಕುನಾಡು, ಕಳೆದ ಪಂಚಾಯತ್ ಚುನಾವಣೆಗೆ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ ತುಳಸಿ ದುಗಮರಗುಡ್ಡೆ ಇವರು ಬಿಜೆಪಿಯಿಂದ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ಆಗದ ಕಾರಣ ಹಾಗೂ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಳ್ಳದ ಕಾರಣ ಶಾಸಕ ರಾಜೇಶ್ ನಾಯ್ಕ್ ನಡೆಗೆ ಬೇಸತ್ತು ಸ್ಥಳೀಯ ಕಾಂಗ್ರೆಸ್ ಬೆಂಬಲಿತ ಪಂಚಾಯತ್ ಸದಸ್ಯರ ಉತ್ತಮ ಕೆಲಸ ಕಾರ್ಯಗಳಿಂದ ಪ್ರೇರಿತಗೊಂಡು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಹಾಗೂ ಸುದೀಪ್ ಕುಮಾರ್ ಶೆಟ್ಟಿ, ಮಾಜಿ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಾದ ಮಾಯಿಲಪ್ಪ ಸಾಲಿಯಾನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಸುಧಾಕರ್ ಶೆಣ್ ಖಂಡಿಗ, ಮಾಜಿ ಜಿಲ್ಲಾ ಪಂಚಾಯತ್ ಪದ್ಮಶೇಖರ್ ಜೈನ್, ಪಿಲಾತಬೆಟ್ಟು ಕಾಂಗ್ರೆಸ್ ಬೆಂಬಲಿತ ಪಂಚಾಯತ್ ಸದಸ್ಯರಾದ ಪುಷ್ಪಲತಾ ಮೋಹನ್ ಸಾಲಿಯನ್, ವನಿತಾ ಆನಂದ, ಲೀಲಾವತಿ ಶೆಟ್ಟಿ ನೆಲ್ವಿಸ್ಟರ್ ಪಿಂಟೊ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಬಾಲಾಜಿ ರಾವ್, ಮಹಿಳಾ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಬೆನ್ನಡಿಟ್ಟ ಡಿಸೋಜಾ, ಪಿಲಾತಬೆಟ್ಟು ಗ್ರಾಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅರುಣ್ ಫರ್ನಾಂಡಿಸ್, ಬೂತು ಕಾಂಗ್ರೆಸ್ ಅಧ್ಯಕ್ಷರಾದ ಪುರುಷೋತ್ತಮ ನಾಕುನಾಡು, ವಿಠಲಶೆಟ್ಟಿ, ವಸಂತ ಹೆಗಡೆ ಹಾಗೂ ಪ್ರಮುಖರಾದ ಮೋಹನ್ ಸಾಲಿಯನ್, ವಿಕ್ಟರ್ ಡಿಸೋಜಾ, ಅಂಬ್ರೋಸ್ ಮೋರಸ್, ಲಾರೆನ್ಸ್ ಡಿಸೋಜ, ಪ್ರಮೋದ್, ಕರುಣಾಕರ ನಾಕುನಾಡು, ನಾರಾಯಣ ಪೂಜಾರಿ ನಾಕುನಾಡು ಉಪಸ್ಥಿತರಿದ್ದರು.




