ವಸತಿ ಶಾಲೆಯಲ್ಲೇ 16 ವರ್ಷದ ವಿದ್ಯಾರ್ಥಿ ಸಾವು
ಹೈದರಾಬಾದ್: ವಸತಿ ಶಾಲೆಯಲ್ಲೇ 16 ವರ್ಷದ ವಿದ್ಯಾರ್ಥಿಯೊಬ್ಬ ದುರಂತ ಅಂತ್ಯ ಕಂಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಸೋಮವಾರ ರಾತ್ರಿ 10 ಗಂಟೆಯ ಬಳಿಕ ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿ ವಸತಿ ನಿಲಯದಿಂದ ನಾಪತ್ತೆಯಾಗಿದ್ದ.
ಸಹ ವಿದ್ಯಾರ್ಥಿಗಳು ಆತನನ್ನು ಹುಡುಕಿದಾಗ ಆತ ಶಾಲೆಯ ಕೊಠಡಿಯೊಂದರಲ್ಲಿ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ವರದಿ ತಿಳಿಸಿದೆ.
ವಿದ್ಯಾರ್ಥಿ ಪಕ್ಕದ ಊರಿನವನೇ ಆಗಿದ್ದು, ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಸಹ ವಿದ್ಯಾರ್ಥಿಗಳು ಕೂಡಲೇ ವಿದ್ಯಾರ್ಥಿಯನ್ನು ಬೇರೆ ವಾಹನದ ನೆರವು ಪಡೆದುಕೊಂಡು ಆಸ್ಪತ್ರೆಗೆ ದಾಖಲಿದ್ದಾರೆ. ಆದರೆ ಆದಾಗಲೇ ವಿದ್ಯಾರ್ಥಿ ಮೃತಪಟ್ಟಿದ್ದ.





