ದ.ಕ.ಜಿಲ್ಲೆಯಲ್ಲಿ ತೀವ್ರ ಬಿಸಿಲು: ವಾಡಿಕೆಗಿಂತ ಹೆಚ್ಚು ಬಿಸಿಲು ದಾಖಲು, ಬಿಸಿಲು ಇನ್ನಷ್ಟು ಹೆಚ್ಚಾಗುವ ಭೀತಿ
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಈ ಬಾರಿ ಫೆಬ್ರವರಿ ಮಧ್ಯಭಾಗದಲ್ಲೇ ಬಿಸಿಲ ಝಳ ತೀವ್ರವಾಗಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಬಿಸಿಲಿದ್ದು, ಮುಂದಿನ ದಿನಗಳಲ್ಲಿ ಬಿಸಿಲು ಇನ್ನಷ್ಟು ಹೆಚ್ಚಳಗೊಳ್ಳುವ ಭೀತಿ ತಲೆದೂರಿದೆ.
ಸಾಮಾನ್ಯವಾಗಿ ಮಾರ್ಚ್ ಬಳಿಕ ಬಿಸಿಲ ಬೇಗೆ ಹೆಚ್ಚಾಗುತ್ತಿತ್ತು. ಆದರೆ, ಫೆಬ್ರವರಿಯಲ್ಲೇ ತಾಪಮಾನ ಏರಿಕೆಯಾಗಿದೆ. ಇದರಿಂದ, ಜ್ವರ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಬಿಸಿಲಿನ ವಾತಾವರಣ, ರಾತ್ರಿ ಚಳಿಯ ವಾತಾವರಣ, ವಾತಾವರಣದಲ್ಲಿ ಏರಿಳಿತಗಳು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಆಸ್ಪತ್ರೆಗಳಲ್ಲಿ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿವೆ ಎನ್ನಲಾಗಿದೆ. ಮಲ್ಲೇಶ್ವರಂನ 7 ವರ್ಷದ ಅಪರ್ಣಾ ಜ್ವರ ಮತ್ತು ನಿರ್ಜಲೀಕರಣದಿಂದ ಬಳಲುತ್ತಿದ್ದು. ನಾವು ಕಳೆದ ವಾರ ಮೂರು ಬಾರಿ ವೈದ್ಯರನ್ನು ಭೇಟಿ ಮಾಡಿದ್ದೇವೆ ಎಂದು ಅವರ ತಾಯಿ ಅಶ್ವಿನಿ ಹೇಳಿದರು.
ಬಿಸಿಲು ಝಳ ಹೆಚ್ಚಾಗುತ್ತಿರುವುದರಿಂದ ಜನರು ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು. ಮಧ್ಯಾಹ್ನದ ಬಿಸಿಲನ್ನು ತಪ್ಪಿಸಿಕೊಳ್ಳುವುದು ಉತ್ತಮ. ಅನಿವಾರ್ಯ ವಾದಲ್ಲಿ ಛತ್ರಿ ಬಳಕೆ ಮಾಡಬಹುದು. ಬಿಸಿಲಿಗೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ನಿರ್ಜಲೀಕರಣ, ಸೂರ್ಯಾಘಾತ ಆಗುವ ಸಾಧ್ಯತೆ ಇದ್ದು, ಹೆಚ್ಚು ನೀರು ಸೇವನೆ ಅಗತ್ಯ. ಲಿಂಬೆ ಪಾನಕ ಸೇವನೆಯಿಂದ ನಿರ್ಜಲೀ ಕರಣ ತಡೆಯುವುದರ ಜತೆಗೆ ದೇಹದಲ್ಲಿ ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಹತ್ತಿ ಬಟ್ಟೆ ಹಾಕಿಕೊಳ್ಳುವುದು ಹೆಚ್ಚು ಉತ್ತಮ; ಇದರಿಂದ ಸನ್‌ಬರ್ನ್ ಉಂಟಾಗುವುದನ್ನೂ ತಡೆಯಬಹುದು ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕಿಶೋರ್ ಕುಮಾರ್ ತಿಳಿಸಿದ್ದಾರೆ.
ಅಪರ್ಣಾಗೆ ಡೆಂಗ್ಯೂ ಮತ್ತು ಟೈಫಾಯಿಡ್ ಇರಬಹುದೇ ಎಂದು ರಕ್ತ ಪರೀಕ್ಷೆಗಳನ್ನು ಸೂಚಿಸಲಾಯಿತು. ಅವರ ಫಲಿತಾಂಶಗಳು ನಕಾರಾತ್ಮಕವಾಗಿವೆ. ಹವಾಮಾನ ಬದಲಾವಣೆಯಿಂದಾಗಿ ಜ್ವರವು ಉಂಟಾಗಿರಬೇಕು ಎಂದು ವೈದ್ಯರು ಹೇಳುತ್ತಾರೆ. ಹವಾಮಾನವು ದೇಹದ ಮೇಲೆ ಪರಿಣಾಮ ಬೀರುತ್ತದೆ.