September 25, 2026

ಸುಳ್ಯ: ಸ್ಕೂಟಿ ಮತ್ತು ಬಸ್ ನಡುವೆ ಅಪಘಾತ: ಸವಾರರಿಬ್ಬರಿಗೆ ಗಾಯ

0
IMG-20230227-WA0021.jpg

ಸುಳ್ಯ: ಸಂಪಾಜೆ ಗ್ರಾಮದ ಕಡೆಪಾಲ ಎಂಬಲ್ಲಿ ಸ್ಕೂಟಿ ಬಸ್ಸಿಗೆ ಡಿಕ್ಕಿ ಹೊಡೆದು ಸ್ಕೂಟಿ ಸವಾರರು ಗಾಯಗೊಂಡ ಘಟನೆ ಫೆ.27 ರಂದು ನಡೆದಿದೆ ಇಬ್ಬರು ಗಾಯಗೊಂಡಿದ್ದು, ಸ್ಕೂಟಿ ಹಾಗೂ ಬಸ್ ನ ಹಿಂಬದಿ ಜಖಂ ಗೊಂಡಿದೆ.

ಸುಳ್ಯ ಕಡೆಯಿಂದ ಕಲ್ಲುಗುಂಡಿಗೆ ಕಡೆಗೆ ಸಂಚರಿಸುತ್ತಿದ್ದ ಸ್ಕೂಟಿ ಚಲಿಸುತ್ತಿದ್ದ ಬಸ್‌ನ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ಸ್ಕೂಟಿ ಸವಾರನಿಗೆ ತಲೆಗೆ ಗಾಯವಾಗಿದೆ. ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಇನ್ನು ಸ್ಕೂಟಿಯ ಹಿಂಬದಿ ಸವಾರ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!