March 21, 2026

ಕಡಬ: ಶ್ರೀಗಂಧ ಹಾಗೂ ವಾಹನ ಕಳವು ಪ್ರಕರಣ: ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ

0
IMG_20230227_194025.jpg

ಕಡಬ: ಪೊಲೀಸ್ ಠಾಣಾ ಅ,ಕ್ರ 53/1984 ಕಲಂ. 62, 71(a), 80,86,87 KF ಆಕ್ಟ್ ಜೊತೆಗೆ 379,411 ಐಪಿಸಿ ಯಂತೆ ಶ್ರೀಗಂಧ ಹಾಗೂ ವಾಹನ ಕಳವು ಪ್ರಕರಣದಲ್ಲಿ ಆರೋಪಿಯಾಗಿ ಸುಮಾರು 40 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಕಲೇಶಪುರ ತಾಲೂಕು ಕೊಡಿಗೆ ಗ್ರಾಮ ಕಾಡೂರು ನಿವಾಸಿ ಅಬ್ಬುಬಕ್ಕರ್ (63) ಬಂಧಿತ ಆರೋಪಿ.

ಆರೋಪಿಯನ್ನು ಕಡಬ ಠಾಣಾ ಹೆಚ್.ಸಿ ರಾಜು ನಾಯಕ್, ಹೆಚ್.ಸಿ ಭವಿತ್ ರಾಜ್ ಮತ್ತು ಪಿಸಿ ಸಿರಾಜುದ್ದೀನ್ ಎಂಬುವರು ಮೂಡಿಗೆರೆ ತಾಲೂಕು ಬಾಳೂರು ಎಂಬಲ್ಲಿ ಪತ್ತೆ ಹಚ್ಚಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನವನ್ನು ವಿಧಿಸಿದೆ.

ಆರೋಪಿಯ ವಿರುದ್ಧ ರಾಣೇಬೆನ್ನೂರು ಪೊಲೀಸ್ ಠಾಣಾ ಅಕ್ರ ,12/1985 ಕಲಂ 279,337, 411 ಐಪಿಸಿ ಮತ್ತು ಕಲಂ 86,87 ಕೆ ಎಫ್ ಆಕ್ಟ್, ಮೈಸೂರು ವಿವಿ ಪುರಂ ಪೊಲೀಸ್ ಠಾಣಾ ಅಕ್ರ 159/1984 ಕಲಂ, 379 ಐಪಿಸಿ ಪ್ರಕರಣಗಳಲ್ಲೂ ವಾರಂಟ್ ಜಾರಿಯಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!