ವಿಟ್ಲದಲ್ಲಿ ಎಸ್.ಐ.ಆರ್. ಅಕ್ರಮಗಳ ವಿರುದ್ಧ ಎಸ್ ಕೆ ಎಸ್ ಎಸ್ ಎಫ್ ನೇತೃತ್ವದಲ್ಲಿ ಪ್ರತಿಭಟನೆ
ವಿಟ್ಲ: ಎಸ್.ಐ.ಆರ್. ಅಕ್ರಮಗಳ ವಿರುದ್ಧ ಹಾಗೂ ಮುಖ್ಯ ಚುನಾವಣಾಧಿಕಾರಿಯನ್ನು ವಜಾಗೊಳಿಸುವಂತೆ ಆಗ್ರಹಿಸಿ ದೇಶಾದ್ಯಂತ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಎಸ್ ಕೆ ಎಸ್ ಎಸ್ ಎಫ್ ವಿಟ್ಲ ವಲಯದ ವತಿಯಿಂದ ವಿಟ್ಲದಲ್ಲಿ ಶುಕ್ರವಾರ ಸಂಜೆ ಪ್ರತಿಭಟನೆ ನಡೆಯಿತು.

ಎಸ್ ಕೆ ಎಸ್ ಎಸ್ ಎಫ್ ದ.ಕ ಈಸ್ಟ್ ಜಿಲ್ಲಾಧ್ಯಕ್ಷ ಝಕರಿಯಾ ಅಸ್ಲಾಮಿ ಮಾತನಾಡಿ ದೇಶದಲ್ಲಿ ಜಾತಿ ಧರ್ಮ ಬೇಧವಿಲ್ಲದೇ ಜೀವಿಸುವ ಹಕ್ಕಿದೆ. ರಾಜಕೀಯ ಪ್ರೇರಿತ ಶಕ್ಷಿಗಳಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿದೆ. ಕೇಂದ್ರ ಸರಕಾರದ ಮುಖ್ಯ ಚುನಾವಣಾಧಿಕಾರಿಗಳ ಮೂಲಕ ಮತದಾರರಿಗೆ ವಂಚನೆ ಮಾಡುತ್ತಿದೆ. ಚುನಾವಣಾಧಿಕಾರಿ ಜ್ಞಾನೇಶ್ ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ರವಿಕಿರಣ್ ಪುಣಚ ಮಾತನಾಡಿ ಮತಗಳ್ಳತನದ ಮೂಲಕ ಬಿಜೆಪಿ ಅಧಿಕಾರ ಹಿಡಿದಿದೆ. ಈ ಸರಕಾರ ರೈತರ, ಜನಸಾಮಾನ್ಯರ ಮೇಲೆ ನಿರಂತರ ದೌರ್ಜನ್ಯ ಮಾಡುತ್ತಿದೆ. ಇಂತಹ ಸರಕಾರ ಮತ್ತು ಚುನಾವಣಾಧಿಕಾರಿಯನ್ನು ಜನರು ಕಿತ್ತೆಸೆಯಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸಮಿತಿ ಸದಸ್ಯ ಕಾಸಿಮ್ ದಾರಿಮಿ ಉಸ್ತಾದ್, ಎಸ್ ಕೆ ಎಸ್ ಎಫ್ ವಿಟ್ಲ ವಲಯಾಧ್ಯಕ್ಷ ಅಶ್ರಪ್ ಕುಂಡಡ್ಕ, ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬ್ ಆರೀಫ್ ಬಾಖವಿ, ಉಮ್ಮರ್ ದಾರಿಮಿ, ಶಫೀಕ್ ಅಝ್ ಹರಿ, ಹಸೈನಾರ್ ಮುಸ್ಲಿಯಾರ್ ಕರೈ, ಸಿ.ಎಚ್ ಇಬ್ರಾಹಿಂ ಮುಸ್ಲಿಯಾರ್, ಇಬ್ರಾಹಿಂ ಝೈನಿ ಕೊಡಂಗಾಯಿ, ಹಕೀಂ ಮುಸ್ಲಿಯಾರ್ ಪರ್ತಿಪ್ಪಾಡಿ, ರಫೀಕ್ ಪೈಝಿ ಕನ್ಯಾನ, ಸಾಧಿಕ್ ಬಾಖವಿ ಪೆರುವಾಯಿ ಬಿ.ಎಂ ಹಸೈನಾರ್ ಕಡಂಬು, ರಮಾನಾಥ ವಿಟ್ಲ, ಶಾಕೀರ್ ಅಳಕೆಮಜಲು, ಕರೀಮ್ ಕುದ್ದುಪದವು, ಹಮೀದ್ ಪುಣಚ, ಹಕೀಮ್ ಪರ್ತಿಪ್ಪಾಡಿ, ಯಾಸೀನ್ ಬೇಗ್, ಬದ್ರುದ್ದೀನ್ ಮರಕ್ಕಿನಿ, ರಾಮ ಮುಗೇರ ಮೊದಲಾದವರು ಭಾಗವಹಿಸಿದ್ದರು.
,,,,,,




