March 21, 2026

ಬಹುಮಹಡಿ ಕಟ್ಟಡದಿಂದ ಬಿದ್ದು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

0
image_editor_output_image-1550115358-1677490745152.jpg

ಬೆಂಗಳೂರು: ಬಹುಮಹಡಿ ಕಟ್ಟಡದಿಂದ ಬಿದ್ದು ಸೋಫಿಯಾ ಸ್ಕೂಲ್ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಬಸವೇಶ್ವರ್ ವೃತ್ತದ ಬಳಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಒಂದು ದಿನದ ಬಳಿಕ ವಿದ್ಯಾರ್ಥಿನಿ ಆತ್ಮಹತ್ಯೆ ಹಿಂದಿನ ಅಸಲಿ ಕಾರಣ ಬಯಲಾಗಿದೆ.

ಸೋಫಿಯಾ ಸ್ಕೂಲ್‌ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಪ್ರಕೃತಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳು. ಈ ಹಿಂದೆ ಎರಡು ಬಾರಿ ಮಾತ್ರೆ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ತಿಳಿದುಬಂದಿದೆ.

ಭಾನುವಾರ ಸಂಜೆಯೂ ಸಹ ದಿನೇ ದಿನೇ ಸಣ್ಣ ಆಗ್ತಾ ಇದ್ದೀನಿ ಸರಿಯಾಗಿ ಆಸ್ಪತ್ರೆಗೆ ತೋರಿಸುತ್ತಿಲ್ಲ ಎಂದು ಪೋಷಕರೊಂದಿಗೆ ಜಗಳ ಮಾಡಿಕೊಂಡು ಮನೆಯಿಂದ ಹೊರಬಂದಿದ್ದಳು.

ಮಗಳು ಹೊರಗೆ ಹೋಗಿದ್ದಾಳೆ ಎಂದು ಪೋಷಕರು ಮನೆಯಲ್ಲೇ ಇದ್ದರು. ಆದರೆ ಹೊರಗೆ ಬಂದವಳೇ ಮೊದಲು ತಾನು ಓದುತ್ತಿದ್ದ ಸೋಫಿಯಾ ಸ್ಕೂಲ್‌ನಲ್ಲೇ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಹೋಗಿದ್ದಾಳೆ. ಆದರೆ ಭಾನುವಾರ ರಜಾದಿನ ಆಗಿದ್ದರಿಂದ ಭದ್ರತಾ ಸಿಬ್ಬಂದಿ ಶಾಲೆ ಆವರಣಕ್ಕೆ ಬಿಡಲು ನಿರಾಕರಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!