ಬಂಟ್ವಾಳ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ರಕ್ತದಾನ ಶಿಬಿರ

ಬಂಟ್ವಾಳ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ಪುರಸಭಾ ಸಮಿತಿ ಹಾಗೂ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಸಹಯೋಗದೊಂದಿಗೆ “ರಕ್ತ ಕೊಟ್ಟು ಬಾಂದವ್ಯ ಕಟ್ಟು” ರಕ್ತದಾನ ಮಾಸಾಚರಣೆ ಉದ್ಘಾಟನಾ ಕಾರ್ಯಕ್ರಮ ಅಂಗವಾಗಿ ರಕ್ತದಾನ ಶಿಬಿರ ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಕಚೇರಿಯಲ್ಲಿ ನಡೆಯಿತು.




ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಪಿ ಐ ಬಂಟ್ವಾಳ ಪುರಸಭಾ ಸಮಿತಿಯ ಅಧ್ಯಕ್ಷರಾದ ಶರೀಫ್ ವಳವೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್ ಡಿ ಪಿ ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಅನ್ವರ್ ಸಾದತ್ ಬಜತ್ತೂರು, ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇದರ ಸಂಯೋಜಕ ಪ್ರವೀಣ್, ಲೇಡಿಗೋಶನ್ ಹಾಸ್ಪಿಟಲ್ ಇದರ ವೈದ್ಯಾಧಿಕಾರಿಯಾದ ಡಾಕ್ಟರ್ ದೇವಿಕಾ, ಎಸ್ ಡಿ ಪಿ ಬಂಟ್ವಾಳ ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಅಶ್ರಫ್ ತಲಪಾಡಿ ಭಾಗವಹಿಸಿದ್ದರು.
ಮುಖ್ಯ ಅತಿಥಿ ಭಾಷಣ ಮಾಡಿದ ಅನ್ವರ್ ಸಾದತ್ ಬಜತ್ತೂರು ಜಿಲ್ಲಾದ್ಯಂತ ರಕ್ತದಾನ ಶಿಬಿರಗಳು ಇತ್ತೀಚಿಗೆ ನಡೆಯದೆ ಇರುವುದರಿಂದ ಎಸ್ ಡಿ ಪಿ ಐ ಬಂಟ್ವಾಳ ಪುರಸಭಾ ಸಮಿತಿ ಹಮ್ಮಿಕೊಂಡಿರುವ ಈ ರಕ್ತದಾನ ಶಿಬಿರವು ಶ್ಲಾಘನೀಯವಾದದು ಎಂದರು.
ರೆಡ್ ಕ್ರಾಸ್ ಸೊಸೈಟಿ ಇದರ ಸಂಯೋಜಕರಾದ ಪ್ರವೀಣ್ ಮಾತನಾಡಿ ರಕ್ತ ಕೊಟ್ಟು ಬಾಂಧವ್ಯ ಕಟ್ಟು ಎಂಬ ಈ ಘೋಶವಾಕ್ಯ ಪ್ರಸ್ತುತ ಕಾಲಕ್ಕೆ ಉತ್ತಮವಾದ ಸಂದೇಶವಾಗಿದೆ ಮತ್ತು ಎಲ್ಲ ಧರ್ಮದ ಸಂಘಟನೆಗಳು ಒಟ್ಟಾಗಿ ರಕ್ತದ ಕೊರತೆಯನ್ನು ನೀಗಿಸಲು ಶಿಬಿರಗಳನ್ನು ಆಯೋಜಿಸಬೇಕು ಎಂದರು.
ಅಧ್ಯಕ್ಷೀಯ ಭಾಷಣ ಮಾಡಿದ ಶರೀಫ್ ವಳವೂರು
ರಕ್ತ ಕೊಟ್ಟು ಬಾಂಧವ್ಯ ಕಟ್ಟು ಈ ಘೋಷವಾಕ್ಯವನ್ನು ದೇಶದಾದ್ಯಂತ ಪಾಲನೆ ಮಾಡಿದರೆ ಸದೃಢ ಭಾರತವನ್ನು ಕಟ್ಟಲು ಸಾಧ್ಯವಿದೆ ಎಂದು ಹೇಳಿದರು.
ರಕ್ತದಾನ ಶಿಬಿರಕ್ಕೆ ಎಸ್ ಡಿ ಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಮುನೀಶ್ ಆಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಎಸ್ ಡಿ ಪಿ ಐ ಅಭ್ಯರ್ಥಿ ಇಲ್ಯಾಸ್ ಮುಹಮ್ಮದ್ ತುಂಬೆ ಜಿಲ್ಲಾ ಸಮಿತಿ ಸದಸ್ಯರಾದ ಯೂಸುಫ್ ಆಲಡ್ಕ ಎಸ್ ಡಿ ಪಿ ಐ ಬಂಟ್ವಾಳ ಚುನಾವಣೆ ಉಸ್ತುವಾರಿ ಸಾಹುಲ್ ಹಮೀದ್ ಎಸ್ ಎಚ್ ಮತ್ತು ಕ್ಷೇತ್ರ ಸಮಿತಿ ಸದಸ್ಯ ಬಶೀರ್ ಬೊಳ್ಳಾಯಿ ಆಗಮಿಸಿ ಶ್ಲಾಘಿಸಿದರು.
ರಕ್ತದಾನ ಶಿಬಿರದಲ್ಲಿ ಒಟ್ಟು 72 ಯೂನಿಟ್ ರಕ್ತ ಶೇಕರಿಸಲಾಯಿತು.ಅನ್ವರ್ ಕೆ ಎಚ್ ನಿರೂಪಿಸಿ ಸ್ವಾಗತಿಸಿದರು.