ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿರುವಾಗ ಕುಸಿದು ಬಿದ್ದು ಪೊಲೀಸ್ ಸಿಬ್ಬಂದಿ ಸಾವು

ಹೈದರಾಬಾದ್: ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಯುವ ಪೊಲೀಸ್ ಕಾನ್ಸ್ ಟೇಬಲ್ ವಿಧಿವಶವಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ವಿಶಾಲ್ (24ವರ್ಷ) ಎಂಬ ಬೋವೆನ್ ಪಲ್ಲಿ ನಿವಾಸಿಯಾಗಿದ್ದು, ಆಸೀಫ್ ನಗರ ಪೊಲೀಸ್ ಠಾಣೆಯಲ್ಲಿ ಕಾನ್ಸ್ ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ (ಎನ್ ಸಿಬಿಐ) ಪ್ರಕಾರ, ಭಾರತದಲ್ಲಿ ಐದನೇ ಒಂದು ಭಾಗದಷ್ಟು ಸಾವುಗಳು ಹೃದಯಾಘಾತ, ಹೃದಯಸ್ತಂಭನ ಮತ್ತು ಪಾರ್ಶ್ವವಾಯುಗಳಿಂದ ಸಂಭವಿಸುತ್ತದೆ. ಇದರಲ್ಲಿ ಯುವ ಸಮೂಹದ ಜನಸಂಖ್ಯೆಯೂ ಸೇರಿರುವುದಾಗಿ ತಿಳಿಸಿದೆ.