ಉಡುಪಿ: ಮಹಿಳೆಯ ಕುತ್ತಿಗೆಯಿಂದ 2.5 ಲಕ್ಷ ಮೌಲ್ಯದ ಚಿನ್ನದ ಸರ ದೋಚಿ ಪರಾರಿ: ಬೈಕ್‌ನಲ್ಲಿ ಬಂದ ಯುವಕರಿಂದ ಕೃತ್ಯ
ಉಡುಪಿ: ಇಲ್ಲಿನ ಬ್ರಹ್ಮಗಿರಿ ಬಳಿ ಬುಧವಾರ ಬೆಳಗ್ಗೆ ಇಲ್ಲಿನ ಬ್ರಹ್ಮಗಿರಿ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ವಯೋವೃದ್ಧೆಯೊಬ್ಬರಿಂದ 2,50,000 ರೂಪಾಯಿ ಮೌಲ್ಯದ ಮಂಗಳಸೂತ್ರವನ್ನು ದೋಚಿದ್ದಾರೆ.
ಮೂಡನಿಡಂಬೂರು ಗ್ರಾಮದ ಬ್ರಹ್ಮಗಿರಿಯ ಸತ್ಯಸಾಯಿ ಮಾರ್ಗದಲ್ಲಿ ವಾಸವಾಗಿರುವ ಜೇಟ್ಲ ಸತ್ಯನಾರಾಯಣ ಅವರ ಪತ್ನಿ ವಿಜಯಾ ಜೆ.ಎಸ್ (61) ಮೃತ ದುರ್ದೈವಿ.
ಮೂಡನಿಡಂಬೂರು ಗ್ರಾಮದ ನಾಯರ್‌ಕೆರೆ ವಾಣಿಜ್ಯ ತೆರಿಗೆ ಭವನದಿಂದ ಬ್ರಹ್ಮಗಿರಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
20 ರಿಂದ 30 ವರ್ಷದೊಳಗಿನ ಇಬ್ಬರು ಯುವಕರು ಪಿರ್ಯಾದಿದಾರರ ಹಿಂಬದಿಯಿಂದ ದ್ವಿಚಕ್ರವಾಹನದಲ್ಲಿ ಬಂದು ಆಕೆಯ ಕುತ್ತಿಗೆಯ ಮೇಲೆ ಕೈಯಿಟ್ಟು ನೆಲಕ್ಕೆ ತಳ್ಳಿ ಮಹಿಳೆಯ ಸುಮಾರು 50 ಗ್ರಾಂ ತೂಕದ ಚಿನ್ನದ ಸರವನ್ನು ದೋಚಿದ್ದಾರೆ.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





