April 8, 2025

ಮುಂದೆಂದೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಇದು ನನ್ನ ವಿದಾಯ ಭಾಷಣವಾಗಿದೆ: ಸದನದಲ್ಲಿ ಭಾವುಕರಾದ ಯಡಿಯೂರಪ್ಪ

0

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬುಧವಾರ ಸದನದಲ್ಲಿ ವಿದಾಯ ಭಾಷಣ ಮಾಡಿದರು. ಮುಂದೆಂದೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಇದು ನನ್ನ ವಿದಾಯ ಭಾಷಣವಾಗಿದೆ ಎಂದು ಹೇಳುತ್ತಾ ಭಾವುಕರಾದರು.

79ರ ಹರೆಯದ ಬಿಎಸ್‌ವೈ ಸದನದಲ್ಲಿ ಮಾತನಾಡುತ್ತಾ, ಸದನದಲ್ಲಿ ಇದು ನನ್ನ ವಿದಾಯದ ಭಾಷಣವಾಗಿದೆ. ಅವಕಾಶ ನೀಡಿದ್ದಕ್ಕೆ ನಾನು ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬುದಾಗಿ ನಾನು ಈಗಾಗಲೇ ಹೇಳಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರು ನನಗೆ ಉತ್ತಮ ಸ್ಥಾನಮಾನ ನೀಡಿದ್ದಾರೆ. ಅದನ್ನೆಂದೂ ಮರೆಯಲಾರೆ ಎಂದರು. ಈ ವೇಳೆ ನೀವು ಮತ್ತೆ ಚುನಾವಣೆಗೆ ಸ್ಪರ್ಧಿಸಬೇಕೆಂದು ಕೆಲವು ವಿಪಕ್ಷ ಸದಸ್ಯರು ಒತ್ತಾಯಿಸಿದರು.

ಯಡಿಯೂರಪ್ಪ ಅವರು ವಯಸ್ಸಿನ ಕಾರಣಕ್ಕಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರೇ ಹೊರತು ಅವರನ್ನು ಆ ಸ್ಥಾನದಿಂದ ಯಾರೂ ಕಿತ್ತು ಹಾಕಿಲ್ಲ ಅವರ ನಾಯಕತ್ವದಲ್ಲೇ ನಾವು ಮುಂದಿನ ಚುನಾವಣೆಯನ್ನೂ ಎದುರಿಸುತ್ತೇವೆ ಎಂಬುದಾಗಿ ಮಂಗಳವಾರವಷ್ಟೇ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದರು.

 

 

Leave a Reply

Your email address will not be published. Required fields are marked *

error: Content is protected !!